ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿಮ್ಮ ಪರೋಪಕಾರಿ, ಉದಾರಿ ಮನೋಭಾವದಿಂದ ತೊಂದರೆಗೆ ಸಿಲುಕಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಆರ್ಥಿಕವ ವ್ಯವಹಾರದಲ್ಲಿ ವಂಚನೆಗೊಳಗಾಗದಂತೆ ಎಚ್ಚರಿಕೆ ವಹಿಸಿ.ವೃಷಭ: ಸಾಂಸಾರಿಕವಾಗಿ ಶಾಂತ ಪರಿಸ್ಥಿತಿಯಿರುತ್ತದೆ. ಸಂಗಾತಿಯಿಂದ ಸೂಕ್ತ ಸಲಹೆಗಳು ಸಿಗುವುದು. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ಆದರೆ ವೃತ್ತಿರಂಗದಲ್ಲಿ ಸಹೋದ್ಯೋಗಿಗಳಿಂದ ಕಿರುಕುಳ ಎದುರಿಸಬೇಕಾದೀತು.ಮಿಥುನ: ಹಣಕಾಸಿನ ಅಡಚಣೆಗಳು ಎದುರಾಗಲಿದ್ದು, ಕೆಲಸ ಕಾರ್ಯಗಳಲ್ಲಿ ವಿಳಂಬ ಗತಿ ತೋರಿಬರಲಿದೆ. ವಾಹನ ಚಲಾಯಿಸುವಾಗ