ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಕಾರ್ಯ ಸಾಧನೆಗಾಗಿ ಅಧಿಕ ಓಡಾಟದಿಂದ ದೇಹಾಯಾಸವಾದೀತು. ಸಂಗಾತಿಯಿಂದ ಮನಸ್ಸಿಗೆ ಬೇಸರವಾಗಬಹುದು. ಹಿರಿಯರ ಸಲಹೆಗಳಿಗೆ ಕಿವಿಗೊಡಿ. ವಿದ್ಯಾರ್ಥಿಗಳಿಗೆ ಆಲಸ್ಯ ಕಂಡುಬರಲಿದೆ.ವೃಷಭ: ನಿರುದ್ಯೋಗಿಗಳಿಗೆ ಬಹುದಿನಗಳಿಂದ ಕಾಯುತ್ತಿದ್ದ ಉದ್ಯೋಗಕ್ಕೆ ಸಂದರ್ಶನದ ಕರೆ ಬರಲಿದೆ. ಕಷ್ಟದ ಸಮಯದಲ್ಲಿ ಹಿರಿಯರ ಸಲಹೆಗಳು ಫಲ ಕೊಡುವುದು. ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.ಮಿಥುನ: ದಾಯಾದಿಗಳೊಂದಿಗೆ ಆಸ್ತಿ ಕುರಿತಾಗಿ ವಾದ ವಿವಾದಗಳಾಗಬಹುದು. ಹಿರಿಯರ ಮಧ್ಯಸ್ಥಿಕೆ ವಹಿಸಬೇಕಾಗುತ್ತದೆ. ಉದ್ಯೋಗಾರ್ಥಿಗಳು ವಿದೇಶ ಪ್ರಯಾಣ ಮಾಡುವರು.