Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಬುಧವಾರ, 26 ಜೂನ್ 2019 (09:02 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಉದ್ಯೋಗದಲ್ಲಿ ಮುನ್ನಡೆ, ಯಶಸ್ಸು ಸಿಗಲಿದೆ. ಆರ್ಥಿಕವಾಗಿ ಬಾಕಿ ಹಣ ವಾಪಸಾತಿಯಾಗುವುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ. ಸಂಗಾತಿಯಿಂದ ಸಹಕಾರ ಮನಸ್ಸಿಗೆ ಖುಷಿಕೊಡುವುದು. ಆರೋಗ್ಯದ ಬಗ್ಗೆ ಕಾಳಜಿವಹಿಸಿ.
 
ವೃಷಭ: ಆರ್ಥಿಕವಾಗಿ ಲಾಭವಿದ್ದಷ್ಟೇ ಖರ್ಚೂ ಇರುವುದು. ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಇಷ್ಟ ಮಿತ್ರರೊಂದಿಗೆ ಪ್ರವಾಸ, ಸಂತಸ ಕ್ಷಣ  ಅನುಭವಿಸುವಿರಿ. ಆದರೆ ಯಾರಿಗಾದರೂ ಈ ದಿನ ಸಾಲ ಕೊಟ್ಟರೆ ಮರಳಿಬಾರದು. ಮಾತಿನ ಬಗ್ಗೆ ನಿಗಾ ಇರಲಿ.
 
ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲವೊಂದು ನಿರ್ಧಾರಗಳು ಮೇಲಧಿಕಾರಿಗಳ ಅಸಮಾಧಾನಕ್ಕೆ ಕಾರಣವಾದೀತು. ಸಂಗಾತಿಯೊಂದಿಗೂ ಮನಸ್ತಾಪಗಳಾಗುವುದರಿಂದ ಮಾನಸಿಕ ನೆಮ್ಮದಿಗೆ ಭಂಗವಾದೀತು. ನೆಮ್ಮದಿಗಾಗಿ ದೇವತಾ ಪ್ರಾರ್ಥನೆ ಮಾಡಿ.
 
ಕರ್ಕಟಕ: ಹಿರಿಯರೊಂದಿಗೆ ವಿನಾಕಾರಣ ವಾಗ್ವಾದಕ್ಕಿಳಿಯಬೇಡಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯಾಗುವುದು. ಪಾಲು ಬಂಡವಾಳ ಹೂಡಿಕೆ, ಗೃಹ ನಿರ್ಮಾಣ ಕೆಲಸಗಳನ್ನು ಆರಂಭಿಸಬಹುದು. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗಾವಕಾಶ ಲಭಿಸುವುದು.
 
ಸಿಂಹ: ಲೆಕ್ಕ ಪತ್ರಗಳ ಬಗ್ಗೆ ಎಚ್ಚರಿಕೆ ಅಗತ್ಯ. ಹಿತಶತ್ರುಗಳು ವಂಚಿಸಿಯಾರು. ಸಾಂಸಾರಿಕವಾಗಿ ಸಂಗಾತಿಯಿಂದ ಸಹಕಾರ ಸಿಕ್ಕಿ ನೆಮ್ಮದಿಯ ವಾತಾವರಣವಿರಲಿದೆ. ಕಷ್ಟ ಎಂದು ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಅನಿರೀಕ್ಷಿತವಾಗಿ ನಡೆಯಲಿದೆ.
 
 
ಕನ್ಯಾ: ಚರ್ಮ ಸಂಬಂಧೀ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ವಾಣಿಜ್ಯೋದ್ಯಮಿಗಳಿಗೆ ಶುಭ ದಿನ. ಅಂದುಕೊಂಡ ಕೆಲಸಗಳು ನೆರವೇರುವುದು. ಆದರೆ ಬಾಕಿ ಹಣ ಪಾವತಿ ವಿಚಾರದಲ್ಲಿ ಕಿರಿ ಕಿರಿಯಾಗಬಹುದು. ದಿನದಂತ್ಯಕ್ಕೆ ಶುಭ ಸುದ್ದಿ.
 
ತುಲಾ: ಬಂಧು ಮಿತ್ರರ ಮನೆಗೆ ಭೇಟಿ ನೀಡುವಿರಿ. ಶುಭ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಕಷ್ಟದಲ್ಲಿದ್ದಾಗ ಮಿತ್ರರ ನೆರವು ಸಿಗಲಿದೆ. ಹಣ ಸಂಪಾದನೆಗೆ ನಾನಾ ಮಾರ್ಗಗಳು ಗೋಚರವಾಗಲಿದೆ. ಮಾನಸಿಕವಾಗಿ ಋಣಾತ್ಮಕ ಚಿಂತನೆ ಬಾಧಿಸದಂತೆ ನೋಡಿಕೊಳ್ಳಿ.
 
ವೃಶ್ಚಿಕ: ಹಿರಿಯರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದೆ. ವೃತ್ತಿರಂಗದಲ್ಲಿ ಹೊಸ ಜವಾಬ್ಧಾರಿಗಳು ನಿಮ್ಮ ಹೆಗಲಿಗೇರಲಿವೆ. ಆದರೆ ಆರ್ಥಿಕವಾಗಿ ಮುನ್ನಡೆ ಹೊಂದುವಿರಿ. ದುಡುಕಿನ ನಿರ್ಧಾರ ಕೈಗೊಳ್ಳಬೇಡಿ.
 
ಧನು: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಉತ್ತಮ ಫಲಿತಾಂಶ ಬರಲಿದ್ದು, ಶಿಕ್ಷಕರ ಮೆಚ್ಚುಗೆ ಗಳಿಸಲಿದ್ದೀರಿ. ಮನೆಯಲ್ಲಿ ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ.ವೃತ್ತಿರಂಗದಲ್ಲಿ ಅನುಕೂಲಕರ ವಾತಾವರಣವಿರಲಿದೆ.
 
ಮಕರ: ವಾಣಿಜ್ಯ ವ್ಯವಹಾರ ಕ್ಷೇತ್ರದಲ್ಲಿ ಉದ್ಯೋಗ ಮಾಡುವವರು ಮುನ್ನಡೆ ಅನುಭವಿಸಲಿದ್ದಾರೆ. ಆದಾಯದಲ್ಲಿ ವೃದ್ಧಿಯಾಗಲಿದ್ದು, ಅಂದುಕೊಂಡ ಕೆಲಸಗಳನ್ನು ಪೂರ್ತಿ ಮಾಡುವಿರಿ. ಕೆಳ ಹಂತದ ಉದ್ಯೋಗಿಗಳಿಗೆ ಮುನ್ನಡೆಯಿರುವುದು.
 
ಕುಂಭ: ಗೃಹೋಪಯೋಗಿ ವಸ್ತುಗಳಿಗೆ ಹೆಚ್ಚಿನ ಧನವ್ಯಯಮಾಡಬೇಕಾಗುತ್ತದೆ. ಆದರೆ ದುಡುಕಿನ ವರ್ತನೆ, ಮಾತು ಸಂಬಂಧ ಕೆಡಿಸೀತು. ಸಾಲ ಪಾವತಿ ಚಿಂತೆ ಕಾಡಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.
 
ಮೀನ: ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಕಷ್ಟದ ಸಮಯದಲ್ಲಿ ಸನ್ಮಿತ್ರರ ನೆರವು ಸಿಗಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳ ಬಗ್ಗೆ ಜಾಗ್ರತೆ ಇರಲಿ. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡಬೇಕಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :