ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ವೃತ್ತಿರಂಗದಲ್ಲಿ ನಿಮ್ಮ ಕೆಲಸಗಳಿಗೆ ಪ್ರಶಂಸೆ ವ್ಯಕ್ತವಾಗುವುದು. ಆರ್ಥಿಕವಾಗಿಯೂ ಧನಾಗಮನಕ್ಕೆ ಕೊರತೆಯಾಗದು. ಆದರೆ ದೈಹಿಕ ಆರೋಗ್ಯ ಸಮಸ್ಯೆಗಳು ಹಿಂಸೆ ನೀಡಲಿವೆ. ಎಚ್ಚರಿಕೆ ಅಗತ್ಯ.ವೃಷಭ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಮಹಿಳೆಯರಿಗೆ ಮಾನಸಿಕ ನೆಮ್ಮದಿಗೆ ಭಂಗವಾಗಲಿದೆ.ಮಿಥುನ: ಕಲೆ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮುನ್ನಡೆ, ಹೆಸರು ಕೀರ್ತಿ ಸಿಗಲಿದೆ. ಆದಾಯವಿದ್ದಷ್ಟೇ