ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಅನಿರೀಕ್ಷಿತವಾಗಿ ಅಂದುಕೊಂಡ ಕಾರ್ಯಗಳು ನೆರವೇರಿ ಮನಸ್ಸಿಗೆ ಖುಷಿ ನೀಡುವುದು. ಸಂಗಾತಿಯೊಂದಿಗಿನ ಮನಸ್ತಾಪಗಳು ದೂರವಾಗುವುದು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ.ವೃಷಭ: ಆತುರದ ನಿರ್ಧಾರದಿಂದ ಉತ್ತಮ ಅವಕಾಶಗಳನ್ನು ಕೈ ಚೆಲ್ಲಬೇಡಿ. ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳುವಿರಿ. ಆದಾಯದ ನಾನಾ ಮೂಲಗಳನ್ನು ಹುಡುಕುವಿರಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.ಮಿಥುನ: ನಿರುದ್ಯೋಗಿಗಳಿಗೆ ನಿರೀಕ್ಷಿತ ಉದ್ಯೋಗಕ್ಕೆ ಸಂದರ್ಶನ ಕರೆ ಬಾರದೇ ನಿರಾಸೆಯಾದೀತು. ಸ್ವ ಉದ್ಯೋಗದ ಕಡೆ ಮನಸ್ಸು ವಾಲಲಿದೆ. ಅನಗತ್ಯ