Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಸೋಮವಾರ, 8 ಜುಲೈ 2019 (08:39 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಆರ್ಥಿಕವಾಗಿ ನಾನಾ ಖರ್ಚುಗಳು ಎದುರಾದರೂ ಆದಾಯಕ್ಕೆ ಕೊರತೆಯಿರದು. ಆದಷ್ಟು ವಾಗ್ವಾದಗಳಿಂದ ದೂರವಿರುವುದೇ ಉತ್ತಮ. ಕಾರ್ಯದೊತ್ತಡ ಅಧಿಕವಾಗುವುದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
 
ವೃಷಭ: ಮಕ್ಕಳ ವಿಚಾರವಾಗಿ ಯೋಚನೆ ಮಾಡಬೇಕಾದ ಕಾಲವಿದು. ಕಾರ್ಯಕ್ಷೇತ್ರದಲ್ಲಿ ಅಧಿಕ ಓಡಾಟವಿರಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗಕ್ಕೆ ಸಂದರ್ಶನ ಕರೆಬರುವುದು. ದೇವತಾ ಪ್ರಾರ್ಥನೆ ಮಾಡಿ.
 
ಮಿಥುನ: ಸಾಂಸಾರಿಕವಾಗಿ ಹಲವು ಕಷ್ಟಕಾರ್ಪಣ್ಯಗಳು ಎದುರಾಗಲಿವೆ. ವಿನಾಕಾರಣ ತೊಂದರೆಗೆ ಸಿಲುಕಿಕೊಳ್ಳುವಿರಿ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಉತ್ತಮ ಅವಕಾಶಗಳು ಎದುರಾಗಲಿವೆ. ದಿನದಂತ್ಯಕ್ಕೆ ಶುಭ ಸುದ್ದಿ.
 
ಕರ್ಕಟಕ: ನ್ಯಾಯಾಲಯದಲ್ಲಿರುವ ವ್ಯಾಜ್ಯಗಳು ನಿಮ್ಮ ಪರವಾಗಿ ಅಂತಿಮಗೊಳ್ಳಲಿದೆ. ಕೃಷಿಕರಿಗೆ ತೊಂದರೆ ತಪ್ಪದು. ಕೆಳ ಹಂತದ ನೌಕರರಿಗೆ ಬಡ್ತಿ ಯೋಗವಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು.
 
ಸಿಂಹ: ವ್ಯಾಪಾರ, ವಹಿವಾಟಿನಲ್ಲಿ ಲಾಭ ಸಿಗಲಿದೆ. ಆದರೆ ಆರೋಗ್ಯದಲ್ಲಿ ಏರುಪೇರಾಗುವುದು. ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕಾಗುತ್ತದೆ.
 
 
ಕನ್ಯಾ: ನಿರುದ್ಯೋಗಿಗಳಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಹ ನಿರಾಶೆಯ ಫಲ ಎದುರಿಸಬೇಕಾಗುತ್ತದೆ. ಸಾಮಾಜಿಕ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವಿರಿ. ಪಾಲಿಗೆ ಬಂದ ಅವಕಾಶಗಳನ್ನು ಬಳಸಿಕೊಳ್ಳಬೇಕು.
 
ತುಲಾ: ಆರ್ಥಿಕವಾಗಿ ನಿಧಾನವಾಗಿ ಚೇತರಿಕೆ ಕಂಡುಬರುವುದು. ಕೈ ಹಾಕಿದ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನ ಮನಸ್ಸಿಗೆ ಖುಷಿ ನೀಡುವುದು.
 
ವೃಶ್ಚಿಕ: ಆರಂಭದಲ್ಲಿ ವಿಘ್ನಗಳಿದ್ದರೂ ಕೈ ಹಿಡಿದ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಸಾಲ ಮರುಪಾವತಿಯಾಗುವುದು. ಹಿರಿಯರ ಸಲಹೆಗಳಿಗೆ ಕಿವಿಗೊಡಬೇಕಾಗುತ್ತದೆ.
 
ಧನು: ನಿಮ್ಮ ಮೃದು ಮಾತಿನಿಂದ ಎಲ್ಲರ ಹೃದಯ ಗೆಲ್ಲಲಿದ್ದೀರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ಆರ್ಥಿಕವಾಗಿ ಲಾಭವಾಗಲಿದೆ. ಆದರೂ ಅತಿಯಾಗಿ ಯಾರನ್ನೂ ನಂಬಿ ವ್ಯವಹಾರ ಮಾಡಲು ಹೋಗಬೇಡಿ.
 
ಮಕರ: ನೀವು ಅಂದುಕೊಂಡ ಕೆಲಸಗಳು ನೆರವೇರಲಿವೆ. ಶಿಕ್ಷಣ ವೃತ್ತಿಯಲ್ಲಿರುವವರಿಗೆ ಮುನ್ನಡೆಯ ಭಾಗ್ಯವಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಹಿರಿಯರ ಸಲಹೆಗಳಿಗೆ ಕಿವಿಗೊಡುವುದು ಉಚಿತ. ಆರೋಗ್ಯದಲ್ಲಿ ಸುಧಾರಣೆಯಾಗುವುದು.
 
ಕುಂಭ: ಅವಿವಾಹಿತರ ವಿವಾಹ ಪ್ರಯತ್ನಕ್ಕೆ ಕೊಂಚ ಹಿನ್ನಡೆಯಾಗಬಹುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡುವಿರಿ. ಋಣಾತ್ಮಕ ಚಿಂತನೆಗೆ ಅವಕಾಶ ಮಾಡಿಕೊಡಬೇಡಿ.
 
ಮೀನ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ. ಅನಿರೀಕ್ಷಿತವಾಗಿ ಧನಲಾಭವಾಗಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಮುಂದಾಗುವಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಇದರಲ್ಲಿ ಇನ್ನಷ್ಟು ಓದಿ :