Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶುಕ್ರವಾರ, 26 ಜುಲೈ 2019 (08:38 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ದೃಢ ನಿರ್ಧಾರದಿಂದ ಮುನ್ನಡೆದರೆ ಕಾರ್ಯ ಸಾಧನೆಯಾಗುವುದು. ಉದ್ಯೋಗ ರಂಗದಲ್ಲಿ ಕೆಳ ಹಂತದ ನೌಕರರಿಂದ ಕಿರಿ ಕಿರಿಯಾಗುವುದು. ಸಂಗಾತಿಯ ಸಹಕಾರವಿರಲಿದೆ. ಕೌಟುಂಬಿಕವಾಗಿ ಮಕ್ಕಳ ಭವಿಷ್ಯದ ಯೋಚನೆಯಾಗುವುದು.
 
ವೃಷಭ: ಪರಿಸ್ಥಿತಿಗೆ ತಕ್ಕಂತೆ ನಡೆದುಕೊಂಡರೆ ತೊಂದರೆಯಾಗದು. ದುಡುಕಿನ ವರ್ತನೆ ತೋರದಿರಿ. ದಾಯಾದಿಗಳಿಂದ ಆಸ್ತಿ ಕುರಿತಾದ ವಿವಾದಗಳು ಎದುರಾಗಲಿವೆ. ಹಿತಶತ್ರುಗಳ ಬಗ್ಗೆ ಎಚ್ಚರವಿರಲಿ. ದಿನದಂತ್ಯಕ್ಕೆ ಶುಭ ಸುದ್ದಿ.
 
ಮಿಥುನ: ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟುಗಳು ಎದುರಾಗುವುದದರಿಂದ ಕಾರ್ಯಸಾಧನೆಗೆ ಅಡ್ಡಿಯಾಗುವುದು. ಕಷ್ಟದ ಸಮಯದಲ್ಲಿ ಬಂಧು ಮಿತ್ರರ ಸಹಕಾರ ಸಿಗುವುದು. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ.
 
ಕರ್ಕಟಕ: ವಿವಾಹ ಬೇಡವೆಂದು ನಿಶ್ಚಯ ಮಾಡಿಕೊಂಡಿದ್ದರೆ ಅನಿರೀಕ್ಷಿತ ರೀತಿಯಲ್ಲಿ ಯೋಗ್ಯ ಸಂಬಂಧ ಕೂಡಿಬರಲಿದೆ. ವೃತ್ತಿರಂಗದಲ್ಲಿ ಸಮಾಧಾನಕರ ವಾತಾವರಣವಿರಲಿದೆ. ಆರ್ಥಿಕವಾಗಿ ಉನ್ನತಿ.
 
ಸಿಂಹ: ಬಾಕಿ ಹಣ ಪಾವತಿಯಾಗುವುದರಿಂದ ಹಣಕಾಸಿನ ತೊಂದರೆಗಳು ದೂರವಾಗುವುದು. ಆದರೆ ಸಂಬಂಧದ ವಿಚಾರದಲ್ಲಿ ಮನಸ್ಸಿಗೆ ಬೇಸರವಾಗುವಂತಹ ಘಟನೆಗಳು ನಡೆಯಬಹುದು. ವ್ಯಾಪಾರದಲ್ಲಿ ಹಿನ್ನಡೆಯಾದೀತು.
 
ಕನ್ಯಾ: ಕಾರ್ಯಕ್ಷೇತ್ರದಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗುವುದು. ಅನಿರೀಕ್ಷಿತ ರೀತಿಯಲ್ಲಿ ಕೆಲವು ಖರ್ಚು ವೆಚ್ಚಗಳಾಗಬಹುದು. ಹಿರಿಯರ ಬಗ್ಗೆ ಕಾಳಜಿಯಿರಲಿ.
 
ತುಲಾ: ಸಾಂಸಾರಿಕವಾಗಿ ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಇದು ಕೆಲವರಿಗೆ ಪಥ್ಯವಾಗದು. ಆದರೆ ಅದರ ಬಗ್ಗೆ ಈಗ ಚಿಂತೆ ಮಾಡುವ ಸಮಯವಲ್ಲ. ದಾಯಾದಿಗಳೊಂದಿಗೆ ರಾಜಿ ಸಂಧಾನ ಮಾಡಿಕೊಳ್ಳಿ.
 
ವೃಶ್ಚಿಕ: ಆರೋಗ್ಯದಲ್ಲಿ ತುಸು ಏರುಪೇರಾಗಿ ಆಸ್ಪತ್ರೆಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಬಹುದು. ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗಬಹುದು.
 
ಧನು: ಸಾಂಸಾರಿಕವಾಗಿ ಸುಂದರವಾದ ದಿನವಿದು. ಮಕ್ಕಳೊಂದಿಗೆ ಸಂತಸದ ಕಾಲ ಕಳೆಯುವಿರಿ.  ಉದ್ಯೋಗ ರಂಗದಲ್ಲಿ ಅಧಿಕ ಕಾರ್ಯದೊತ್ತಡವಿರಲಿದೆ. ವಾಹನ ಖರೀದಿ ಯೋಗವಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಮುನ್ನಡೆಯಿರಲಿದೆ.
 
ಮಕರ: ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟುಗಳು ಎದುರಾದರೂ ಸಾಂಸಾರಿಕ ಸುಖಕ್ಕೆ ಕೊರತೆಯಾಗದು. ಕಾರ್ಯಕ್ಷೇತ್ರದಲ್ಲಿ ಹಂತ ಹಂತವಾಗಿ ಮುನ್ನಡೆ ಸಾಧಿಸಲಿದ್ದೀರಿ. ದಿನದಂತ್ಯಕ್ಕೆ ಶುಭ ಸುದ್ದಿ.
 
ಕುಂಭ: ತಾಳ್ಮೆ ಸಮಾಧಾನದಿಂದ ಮುನ್ನಡೆದರೆ ಯಶಸ್ಸು ಸಾಧ್ಯ. ಪ್ರಾಮಾಣಿಕತೆಗೆ ತಕ್ಕ ಫಲ ದೊರೆಯಲಿದೆ. ಋಣಾತ್ಮಕ ಚಿಂತನೆಗಳಿಗೆ ಅವಕಾಶ ಮಾಡಿಕೊಡದಿರಿ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ.
 
ಮೀನ: ಮನೆಯಲ್ಲಿ ಶುಭ ಮಂಗಲ ಕಾರ್ಯ ನಡೆಯಲಿದ್ದು, ಓಡಾಟ ನಡೆಸಬೇಕಾಗುತ್ತದೆ. ಹೊಸ ಜನರ ಭೇಟಿಯಾಗುವಿರಿ. ಹೊಸ ಉದ್ಯೋಗಾವಕಾಶಗಳ ಬಗ್ಗೆ ಯೋಚನೆ ಮಾಡುವಿರಿ. ದೇವತಾ ಪ್ರಾರ್ಥನೆ ಮಾಡಿ.
ಇದರಲ್ಲಿ ಇನ್ನಷ್ಟು ಓದಿ :