ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಬುಧವಾರ, 31 ಜುಲೈ 2019 (08:36 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 


ಮೇಷ: ಕೈ ತುಂಬಾ ಕೆಲಸಗಳಿದ್ದು, ಆದಾಯಕ್ಕೂ ಕೊರತೆಯಾಗದು. ಆದರೆ ಆರೋಗ್ಯ ಸಮಸ್ಯೆಯಿಂದ ಅಂದುಕೊಂಡ ರೀತಿ ಕೆಲಸ ನಿಭಾಯಿಸಲು ಸಾಧ‍್ಯವಾಗದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.
 
ವೃಷಭ: ಕೆಲಸ ನಿರ್ವಹಿಸಲು ಆತ್ಮವಿಶ್ವಾಸದ ಕೊರತೆ ಎದುರಾಗುವುದು. ಕುಲದೇವರ ಹರಕೆ ತೀರಿಸುವಿರಿ. ಬಂಧು ಮಿತ್ರರ ಆಗಮನದಿಂದ ಮನಸ್ಸಿಗೆ ಖುಷಿಯಾಗುವುದು. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡುವಿರಿ.
 
ಮಿಥುನ: ದೃಢ ಸಂಕಲ್ಪದಿಂದ ಕಾರ್ಯಗಳನ್ನು ಕೈಗೆತ್ತಿಕೊಳ್ಳಿ. ವಿಘ್ನಗಳು ಎದುರಾದರೂ ಎದೆಗುಂದಬೇಡಿ. ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಮನಸ್ತಾಪ ಬೇಸರವುಂಟುಮಾಡಬಹುದು. ತಾಳ್ಮೆಯಿಂದಿರಿ.
 
ಕರ್ಕಟಕ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸುವಿರಿ. ಇದರಿಂದ ಮನಸ್ಸಿಗೆ ನೆಮ್ಮದಿಯಾಗುವುದು. ಬಂಧು ಮಿತ್ರರಿಂದ ಸಂಕಷ್ಟದ ಸಮಯದಲ್ಲಿ ಸಹಾಯವೊದಗಿಬರುವುದು. ಆರ್ಥಿಕವಾಗಿ ಸುಧಾರಣೆಯಾಗಲಿದೆ.
 
ಸಿಂಹ: ವೃತ್ತಿರಂಗದಲ್ಲಿ ಸ್ಥಾನ ಮಾನ ವೃದ್ಧಿಯಾಗುವುದು. ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗುವಿರಿ. ದಾಯಾದಿಗಳೊಂದಿಗಿನ ಮನಸ್ತಾಪಗಳಿಗೆ ಹಿರಿಯರ ಮಧ್ಯಸ್ಥಿಕೆ ವಹಿಸಿ. ಸಂಚಾರದಲ್ಲಿ ಎಚ್ಚರಿಕೆ.
 
ಕನ್ಯಾ: ಆದಾಯವಿದ್ದಷ್ಟೇ ಖರ್ಚೂ ತಲೆದೋರುವುದು. ಮಹಿಳೆಯರಿಂದ ಸಮಸ್ಯೆಗಳು ಎದುರಾಗಬಹುದು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಹಿನ್ನಡೆಯಾದೀತು. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ.
 
ತುಲಾ: ವೃತ್ತಿರಂಗದಲ್ಲಿ ಬಡ್ತಿ, ವೇತನ ಹೆಚ್ಚಳ ಸಂಭವವಿದೆ. ಮನೆ ಅಥವಾ ವಾಸ ಸ್ಥಳ ಬದಲಾವಣೆಗೆ ಚಿಂತನೆ ಮಾಡುವಿರಿ. ಸರಕಾರಿ ಕೆಲಸಗಳಲ್ಲಿ ಜಯ. ಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ.
 
ವೃಶ್ಚಿಕ: ಇನ್ನೊಬ್ಬರಿಗೆ ಸಹಾಯ ಮಾಡಲು ಹೋಗಿ ಕೈಸುಟ್ಟುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಬಹುದು. ಆರೋಗ್ಯದಲ್ಲಿ ಏರುಪೇರಾಗಬಹುದು. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗಲಿದೆ.
 
ಧನು: ಇಷ್ಟ ಮಿತ್ರರ ಭೇಟಿ, ಭೋಜನ ಯೋಗವಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶದಿಂದ ಖುಷಿಯಾಗುವುದು. ವೃತ್ತಿರಂಗದಲ್ಲಿ ಸಮಾಧಾನಕರ ವಾತಾವರಣವಿರಲಿದೆ. ದೈವಾನುಕೂಲದಿಂದ ನೀವು ಅಂದುಕೊಂಡಂತೇ ಕೆಲಸಗಳು ನೆರವೇರಲಿವೆ.
 
ಮಕರ: ಆರ್ಥಿಕವಾಗಿ ಆದಾಯವಿದ್ದು, ಹಂತ ಹಂತವಾಗಿ ಚೇತರಿಕೆ ಕಾಣುವಿರಿ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗುವುದು. ಚಾಡಿ ಮಾತುಗಳಿಗೆ ಕಿವಿಗೊಡಬೇಕಿಲ್ಲ.
 
ಕುಂಭ: ಇಂದು ಸುಖ-ದುಃಖ ಎರಡೂ ಸಮಾನವಾಗಿ ಎದುರಾಗುವುದು. ಅತಿಯಾಗಿ ಯಾರನ್ನೂ ನಂಬಲು ಹೋಗಬೇಡಿ. ವಂಚನೆಗೊಳಗಾಗುವ ಭೀತಿಯಿದೆ. ಆದರೆ ಸಾಂಸಾರಿಕವಾಗಿ ಸುಖಾನುಭವ ಪಡೆಯುವಿರಿ.
 
ಮೀನ: ಪ್ರೇಮಿಗಳಿಗೆ ವಿವಾಹಕ್ಕೆ ಮನೆಯವರಿಂದ ಒಪ್ಪಿಗೆ ಸಿಗುವುದು. ತಾತ್ಕಾಲಿಕ ವೃತ್ತಿಯವರಿಗೆ ಬಡ್ತಿ ಯೋಗವಿದೆ. ವ್ಯಾಪಾರಿ ವೃತ್ತಿಯವರಿಗೆ ಲಾಭ ಗಳಿಕೆ ಮಾಡಲು ಅವಕಾಶಗಳು ಒದಗಿಬರಲಿವೆ. ದಿನದಂತ್ಯಕ್ಕೆ ಶುಭ ಸುದ್ದಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಯಾವ ಬೆರಳಿನಿಂದ ಕುಂಕುಮ ಹಚ್ಚಿಕೊಳ್ಳಬೇಕು?

ಬೆಂಗಳೂರು: ಹಣೆ ಮೇಲೆ ಕುಂಕುಮ ಇಡುವುದು ಹಿಂದೂ ಧರ್ಮದ ಸಂಪ್ರದಾಯ. ಆದರೆ ಕುಂಕುಮ ಯಾವ ಬೆರಳಿನಿಂದ ಇಡಬೇಕು ...

news

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

news

ನಾಗಾರಾಧನೆಯನ್ನು ಯಾವಾಗ ಮಾಡಬೇಕು?

ಬೆಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ನಾಗದೇವರಿಗೆ ಆಶ್ಲೇಷ ಪೂಜೆ, ಸರ್ಪಸಂಸ್ಕಾರ ಮಾಡುವ ಮೂಲಕ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.