Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶನಿವಾರ, 3 ಆಗಸ್ಟ್ 2019 (08:54 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಆರೋಗ್ಯ ಸಮಸ್ಯೆಗೆ ಚಿಂತೆಗೆ ಕಾರಣವಾಗುವುದು. ದಾಂಪತ್ಯ ಜೀವನದಲ್ಲಿ ಸಂತೋಷ ಸಿಗಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನೆರವೇರುವುದು. ವಿದ್ಯಾರ್ಥಿಗಳು ಪರಿಶ್ರಮ ಪಡಬೇಕಾಗುತ್ತದೆ.
 
ವೃಷಭ: ಅಂದುಕೊಂಡ ಕೆಲಸ ಕಾರ್ಯಗಳನ್ನು ನಿಭಾಯಿಸಲು ಸಂಗಾತಿಯ ಸಹಕಾರ ಸಿಗಲಿದೆ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ನಿರುದ್ಯೋಗಿಗಳು ಸ್ವ ಉದ್ಯೋಗ ಮಾಡಿದರೆ ಉತ್ತಮ.
 
ಮಿಥುನ: ಕೆಲಸ ಕಾರ್ಯಗಳಲ್ಲಿ ಕೊಂಚ ಹಿನ್ನಡೆಯಾದೀತು. ಆರ್ಥಿಕವಾಗಿ ಖರ್ಚು ವೆಚ್ಚಗಳ ಬಗ್ಗೆ ಎಚ್ಚರ ವಹಿಸಬೇಕಾದೀತು. ಸಾಮಾಜಿಕವಾಗಿ ಮನ್ನಣೆ ಗಳಿಸಲಿದ್ದೀರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.
 
ಕರ್ಕಟಕ: ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನದಿಂದ ಸಂತಸದ ವಾತಾವರಣವಿರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಕಾಣುವಿರಿ. ಮಿತ್ರರ ಕಷ್ಟದಲ್ಲಿ ಸಹಾಯ ಮಾಡುವಿರಿ. ಆದರೆ ಹಿತಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ.
 
ಸಿಂಹ: ನಿರುದ್ಯೋಗಿಗಳಿಗೆ ಉದ್ಯೋಗ ಸಂಬಂಧವಾಗಿ ಸಂತಸದ ವಾರ್ತೆ ಕೇಳಿಬರುವುದು. ಬಂಧು ಮಿತ್ರರ ಹೊಗಳಿಕೆಗೆ ಪಾತ್ರರಾಗುವಿರಿ. ದೂರ ಸಂಚಾರ ಮಾಡಬೇಕಾಗಿ ಬರುತ್ತದೆ. ಆದರೆ ಪ್ರಯಾಣದಲ್ಲಿ ಎಚ್ಚರಿಕೆಯಿರಲಿ.
 
ಕನ್ಯಾ: ಎಷ್ಟೋ ದಿನದಿಂದ ಕಾಡುತ್ತಿದ್ದ ಸಮಸ್ಯೆಗೆ ಒಂದು ರೀತಿಯ ಅಂತ್ಯ ಸಿಗಲಿದೆ. ಸಂಗಾತಿಯ ಸಹಕಾರದಿಂದ ಮನಸ್ಸಿಗೆ ನೆಮ್ಮದಿಯಾಗುವುದು. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡವಿರಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ.
 
ತುಲಾ: ಕೌಟುಂಬಿಕ ಒತ್ತಡಗಳು ಮನಸ್ಸಿಗೆ ಕಿರಿ ಕಿರಿ ಕೊಡುವುದು. ಹಾಗಿದ್ದರೂ ಸಂಗಾತಿಯ ಸಮಯೋಚಿತ ಸಲಹೆ ಉಪಯೋಗಕ್ಕೆ ಬರುವುದು. ದೇಹಾರೋಗ್ಯದ ಬಗ್ಗೆ ಗಮನವಿರಲಿ. ಉದ್ಯೋಗ ಕ್ಷೇತ್ರದಲ್ಲಿ ವೃತ್ತಿ ಮಾತ್ಸರ್ಯ ಕಂಡುಬರಬಹುದು.
 
ವೃಶ್ಚಿಕ: ಇಷ್ಟು ದಿನ ನಿಮ್ಮಿಂದ ದೂರವಿದ್ದವರು ಈಗ ತಾವಾಗಿಯೇ ಹತ್ತಿರ ಬರುವರು. ಕೆಲಸದಲ್ಲಿ ಕ್ರಿಯಾಶೀಲತೆ ತೋರುವಿರಿ. ತಾಳ್ಮೆ- ಸಮಾಧಾನದಿಂದ ಮುನ್ನಡೆಯಬೇಕು. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
 
ಧನು: ಮಕ್ಕಳಿಂದ ಶುಭ ವಾರ್ತೆ ಆಲಿಸುವಿರಿ. ಆಹಾರ ಸೇವನೆಯಲ್ಲಿ ಏರುಪೇರಾಗಿ ಆರೋಗ್ಯ ಹದಗೆಡಬಹುದು. ಎಚ್ಚರಿಕೆ ಅಗತ್ಯ. ಖರ್ಚು ವೆಚ್ಚಗಳು ಅಧಿಕವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯಿದೆ.
 
ಮಕರ: ಕಷ್ಟದ ಸಮಯದಲ್ಲಿ ಪ್ರೀತಿ ಪಾತ್ರರ ಸಹಕಾರ ಅಗತ್ಯ. ವಾದ ವಿವಾದಗಳಲ್ಲಿ ಮೂಗು ತೂರಿಸಿ ತೊಂದರೆಗೆ ಸಿಲುಕಿಕೊಳ್ಳದಂತೆ ಎಚ್ಚರವಹಿಸಿ. ಮನಸ್ಸಿನಲ್ಲಿ ಅಂದುಕೊಂಡ ಕಾರ್ಯಗಳನ್ನು ಕಾರ್ಯರೂಪಕ್ಕೆ ತರಲು ಸಕಾಲ.
 
ಕುಂಭ: ಆಪ್ತರಿಂದ ದೂರವಾಗುವ ಬೇಸರ ಕಾಡಲಿದೆ. ಕೈಗೆ ಸಿಗದ ವಸ್ತುವಿನ ಬಗ್ಗೆ ಪರಿತಪಿಸುವ ಅಗತ್ಯವಿಲ್ಲ. ದೈಹಿಕವಾಗಿ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ದಾಯಾದಿಗಳೊಂದಿಗಿನ ಸಂಬಂಧ ಸುಧಾರಣೆಯಾಗುವುದು.
 
ಮೀನ: ಕಾರ್ಯಕ್ಷೇತ್ರದಲ್ಲಿ ಉತ್ಸಾಹ ತೋರಿಸುವಿರಿ. ಸಾಂಸಾರಿಕವಾಗಿ ಹೊಂದಾಣಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಅವಿವಾಹಿತರಿಗೆ ವಿವಾಹ ಪ್ರಯತ್ನದಲ್ಲಿ ಮುನ್ನಡೆ ಸಿಗಲಿದೆ. ದೇವತಾ ಪ್ರಾರ್ಥನೆ ಮಾಡಿ.
ಇದರಲ್ಲಿ ಇನ್ನಷ್ಟು ಓದಿ :