ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಇಂದು ಅತ್ಯಂತ ಸಂಕಷ್ಟಗಳಿಂದ ಕೂಡಿದ ದಿನ ನಿಮ್ಮದಾಗಲಿದೆ. ಆದರೆ ಸಹನೆ ಕಳೆದುಕೊಳ್ಳದೇ ತಾಳ್ಮೆಯಿಂದ ನಡೆದುಕೊಳ್ಳಬೇಕಾದ ಅಗತ್ಯವಿದೆ. ವಿದ್ಯಾರ್ಥಿಗಳಲ್ಲಿ ನಿರುತ್ಸಾಹ ಕಂಡುಬಂದೀತು.ವೃಷಭ: ಸಂದಿಗ್ಧತೆಗಳು ಎದುರಾದಾಗ ಗೆಳೆಯರಿಂದ ಸೂಕ್ತ ಸಲಹೆಗಳು ಸಿಕ್ಕಿ ಪರಿಹಾರ ಕಂಡುಕೊಳ್ಳುವಿರಿ. ವೃತ್ತಿರಂಗದಲ್ಲಿ ಮುನ್ನಡೆಯಿರುತ್ತದೆ. ಪ್ರೇಮಿಗಳ ಪಾಲಿಗೆ ಮಹತ್ವದ ದಿನ. ದಿನದಂತ್ಯಕ್ಕೆ ಶುಭ ವಾರ್ತೆ.ಮಿಥುನ: ನಿಮ್ಮ ದುಡುಕು ವರ್ತನೆಯಿಂದ ಪರರ ಅಸಹನೆಗೆ ಗುರಿಯಾಗುವಿರಿ. ನಿರ್ಧಾರ ಕೈಗೊಳ್ಳುವಾಗ ಗೊಂದಲಗಳು ಎದುರಾಗಬಹುದು.