Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶನಿವಾರ, 28 ಸೆಪ್ಟಂಬರ್ 2019 (08:06 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಪ್ರತಿಭೆ ಸಾಬೀತುಪಡಿಸಲು ಹಲವು ಅವಕಾಶಗಳು ಹುಡುಕಿಕೊಂಡು ಬರಲಿವೆ. ಅದನ್ನು ಬಳಸಿಕೊಳ್ಳುವ ಜಾಣತನ ಬೆಳೆಸಿಕೊಳ್ಳಬೇಕು. ಗೃಹೋಪಯೋಗಿ ವಸ್ತುಗಳಿಗೆ ಖರ್ಚು ವೆಚ್ಚಗಳಾಗುವುದು. ದೂರ ಸಂಚಾರದಲ್ಲಿ ಜಾಗ್ರತೆಯಿರಲಿ.
 
ವೃಷಭ: ಕೆಲಸದ ಒತ್ತಡ ಅಧಿಕವಾಗುವುದು. ನಿಮ್ಮ ಏಳಿಗೆಗೆ ಹಿತಶತ್ರುಗಳೂ ಅಸೂಯೆಪಡುವರು. ಆದರೂ ಎಷ್ಟೇ ದುಡಿದರೂ ತೃಪ್ತಿಯಿಲ್ಲದ ಭಾವ ಕಾಡಲಿದೆ. ಆಲಸ್ಯತನ, ಗೊಂದಲದ ಮನಸ್ಥಿತಿಯಿಂದಾಗಿ ಅಂದುಕೊಂಡ ಕೆಲಸಗಳು ನಿಧಾನವಾಗುವುದು.
 
ಮಿಥುನ: ಬಂಧು ಬಳಗದವರಿಗೆ ನಿಮ್ಮ ನಿರ್ಧಾರಗಳು ಇಷ್ಟವಾಗದೇ ಹೋಗಬಹುದು. ಆದರೆ ವಾಗ್ವಾದಕ್ಕಿಳಿಯಬೇಡಿ. ದುಡುಕು ವರ್ತನೆ ತೋರದಿರಿ. ಕೌಟುಂಬಿಕವಾಗಿ ಸಂಗಾತಿಯ ಸಹಕಾರ ಸಿಗಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಮಿಶ್ರಫಲ ಸಿಗಲಿದೆ.
 
ಕರ್ಕಟಕ: ಹಲವಾರು ಬೆಳವಣಿಗೆಗಳು ನಡೆದು ಮನಸ್ಸು ಗೊಂದಲದ ಗೂಡಾಗುವುದು. ಹಾಗಿದ್ದರೂ ವೃತ್ತಿ ಜೀವನದಲ್ಲಿ ನಿಮ್ಮ ಏಳಿಗೆಯನ್ನು ಯಾರಿಂದಲೂ ತಡೆಯಲು ಸಾಧ‍್ಯವಿಲ್ಲ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಪ್ರೀತಿ ಪಾತ್ರರೊಂದಿಗೆ ಅಮೂಲ್ಯ ಸಮಯ ಕಳೆಯುವಿರಿ.
 
ಸಿಂಹ: ಆಪ್ತರೊಂದಿಗೆ ಸಹನೆಯಿಂದ ನಡೆದುಕೊಳ್ಳುವುದು ಮುಖ್ಯ. ಕೋಪದ ಕೈಗೆ ಬುದ್ಧಿ ಕೊಡಬೇಡಿ. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಕೊರತೆ ಕಂಡುಬರುವುದು. ಉದರ ಸಂಬಂಧೀ ಆರೋಗ್ಯದ ಕಡೆಗೆ ಕಾಳಜಿ ವಹಿಸಿ. ಆರ್ಥಿಕವಾಗಿ ಹಣಕಾಸಿಗೆ ಕೊರತೆಯಾಗದು.
 
 
ಕನ್ಯಾ: ಆರ್ಥಿಕವಾಗಿ ಹಲವು ರೀತಿಯಲ್ಲಿ ಖರ್ಚು ವೆಚ್ಚಗಳು ಎದುರಾಗಲಿವೆ. ಹೊಸ ವ್ಯವಹಾರಗಳಿಗೆ ಹೂಡಿಕೆ ಮಾಡುವ ನಿಮ್ಮ ಆಲೋಚನೆ ಅರ್ಧಕ್ಕೇ ನಿಲ್ಲುವುದು. ಸಂಗಾತಿಯ ದೇಹಾರೋಗ್ಯದ ಬಗ್ಗೆ ಗಮನಕೊಡಿ. ಕಾರ್ಯನಿಮಿತ್ತ ಕಿರು ಸಂಚಾರ ಸಾಧ್ಯತೆ.
 
ತುಲಾ: ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸುವಿರಿ. ಅಧಿಕ ಓಡಾಟದಿಂದ ದೇಹಾಯಾಸವಾದೀತು. ವಿದ್ಯಾರ್ಥಿಗಳಿಗೆ ನಿರೀಕ್ಷಿಸಿದಂತೇ ಉತ್ತಮ ಫಲ ದೊರೆಯುವುದು. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಲಿವೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.
 
ವೃಶ್ಚಿಕ: ವ್ಯವಹಾರದಲ್ಲಿ ಬರುವ ಕಷ್ಟ ನಷ್ಟಗಳನ್ನು ಎದುರಿಸುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಆದಾಯದಷ್ಟೇ ಖರ್ಚೂ ಕಂಡುಬರಲಿವೆ. ನೂತನ ದಂಪತಿಗಳಿಗೆ ಮಧುಚಂದ್ರ ಭಾಗ್ಯ. ಪ್ರೇಮಿಗಳಿಗೆ ಮನೆಯವರಿಂದ ವಿರೋಧ. ಉದ್ಯೋಗ ನಿಮಿತ್ತ ಕಿರು ಸಂಚಾರ ಸಾಧ್ಯತೆ.
 
ಧನು: ಅನಿರೀಕ್ಷಿತವಾಗಿ ಅಚ್ಚರಿಯ ವಾರ್ತೆಗಳು ಕೇಳಿಬರುವುದು. ಧಾರ್ಮಿಕ ಕ್ಷೇತ್ರಗಳಿಗೆ ಸಂದರ್ಶನ ಯೋಗವಿದೆ. ದೂರ ಸಂಚಾರದಿಂದ ದೇಹಾಯಾಸವಾದೀತು. ಆಪ್ತರ ಜತೆ ಮಾತನಾಡುವಾಗ ದುಡುಕಬೇಡಿ. ಹೊಂದಾಣಿಕೆಯಿಂದ ನಡೆದುಕೊಳ್ಳುವುದು ಮುಖ್ಯ.
 
ಮಕರ: ಹಿತಶತ್ರುಗಳಿಂದ ನಿಮ್ಮ ಕೆಲಸಗಳಿಗೆ ತೊಂದರೆಯಾಗಬಹುದು. ನಿಮ್ಮ ಕ್ರಿಯಾಶೀತಲೆಯಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ಸಾಮಾಜಿಕವಾಗಿ ನಿಮ್ಮ ಕೆಲಸಗಳಿಗೆ ಮನ್ನಣೆ ಸಿಗುವುದು. ವೃತ್ತಿ ಬದಲಾವಣೆಗೆ ಇದು ಸಕಾಲ. ದಿನದಂತ್ಯಕ್ಕೆ ಶುಭ ಸುದ್ದಿ.
 
ಕುಂಭ: ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿ, ಆತಂಕಗಳು ಎದುರಾಗಬಹುದು. ಕುಲದೇವರ ಪ್ರಾರ್ಥನೆಯೊಂದಿಗೆ ಇಂದಿನ ದಿನ ಆರಂಭಿಸಿದರೆ ಶುಭವಾಗಲಿದೆ. ಧನಾರ್ಜನೆಗೆ ನಾನಾ ಮಾರ್ಗಗಳನ್ನು ಹುಡುಕುವಿರಿ. ಕೌಟುಂಬಿಕವಾಗಿ ಯಾರನ್ನೂ ನಂಬದ ಸ್ಥಿತಿ.
 
ಮೀನ: ಆಕಸ್ಮಿಕ ಧನ ಹಾನಿ, ಮಾನ ಹಾನಿ ಸಂಭವ. ಚಾಡಿ ಮಾತುಗಳಿಗೆ ಕಿವಿಗೊಡಬೇಡಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಮಹಿಳಾ ಉದ್ಯೋಗಿಗಳಿಗೆ ಕಾರ್ಯದೊತ್ತಡವಿರಲಿದೆ. ನಿರುದ್ಯೋಗಿಗಳು ಸ್ವ ಉದ್ಯೋಗದ ಕಡೆಗೆ ಮನಸ್ಸು ಮಾಡಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :