ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಸಂಗಾತಿಯೊಂದಿಗಿನ ಮನಸ್ತಾಪಗಳಿಂದ ಮನಸ್ಸಿಗೆ ಬೇಸರವಾಗುವುದು. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನದಿಂದ ಖರ್ಚು ವೆಚ್ಚಗಳು ಹೆಚ್ಚುವುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.ವೃಷಭ: ಅಂದುಕೊಂಡ ಕೆಲಸಗಳಿಗೆ ಹಲವು ಅಡೆತಡೆಗಳು ಎದುರಾದರೂ ಧೈರ್ಯದಿಂದ ಮುನ್ನುಗ್ಗಿದ್ದರೆ ಯಶಸ್ಸು ಸಿಗುವುದು. ವಾಹನ ಖರೀದಿ ಯೋಗವಿದೆ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಕಾರ್ಯನಿಮಿತ್ತ ಕಿರು ಸಂಚಾರ ಯೋಗವಿದೆ.ಮಿಥುನ: ಅನಿವಾರ್ಯವಾಗಿ ವೃತ್ತಿಂರಗದಲ್ಲಿ ಹೊಸ ಜವಾಬ್ಧಾರಿಗಳನ್ನು ಹೊರಬೇಕಾಗುತ್ತದೆ.