ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನಕ ವಾತಾವರಣವಿರಲಿದೆ. ಕೌಟುಂಬಿಕವಾಗಿ ಕೆಲವೊಂದು ಮಾನಸಿಕ ಕಿರಿ ಕಿರಿಗಳು ಕೊನೆಯಾಗಲಿವೆ. ಆದರೆ ಋಣಾತ್ಮಕ ಚಿಂತೆಗಳು ಕಾಡುವುದು. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರುವುದು.ವೃಷಭ: ವ್ಯಾಪಾರ ವ್ಯವಹಾರದಲ್ಲಿ ಉನ್ನತಿ ಕಂಡುಬರುವುದು. ಆದರೆ ಹಿತ ಶತ್ರುಗಳು ವಂಚನೆ ಮಾಡುವ ಭೀತಿಯಿರಲಿದೆ. ಎಚ್ಚರಿಕೆಯಿಂದ ವ್ಯವಹರಿಸಬೇಕು. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ ತಪ್ಪದು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ.ಮಿಥುನ: ಸಂಗಾತಿಯೊಂದಿಗೆ ಕಲಹವಾಗಬಹುದು.