ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಗೃಹ ನಿರ್ಮಾಣ ಕಾರ್ಯಗಳಿಗೆ ಸಿದ್ಧತೆ ನಡೆಸುವಿರಿ. ವೃತ್ತಿರಂಗದಲ್ಲಿ ಬಿಡುವಿಲ್ಲದ ಕಾರ್ಯದೊತ್ತಡವಿರಲಿದೆ. ಅನಗತ್ಯ ವಿವಾದಗಳಿಂದ ದೂರವಿರಿ. ಸಂಗಾತಿಯ ಅಸಮಾಧಾನಕ್ಕೆ ಗುರಿಯಾಗುವಿರಿ. ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ.ವೃಷಭ: ಕಾರ್ಯಾರಂಭದಲ್ಲಿ ಅನೇಕ ಅಡೆತಡೆಗಳು ಬರಲಿವೆ. ಹಾಗಿದ್ದರೂ ಆತ್ಮಸ್ಥೈರ್ಯದಿಂದ ಮುನ್ನಡೆದರೆ ಅಂದುಕೊಂಡ ಕಾರ್ಯಗಳು ನೆರವೇರಿಸುವಿರಿ. ನಿರೀಕ್ಷಿತ ಮೂಲಗಳಿಂದ ಧನಾಗಮನವಾಗಲಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.ಮಿಥುನ: ದೂರ ಸಂಚಾರದಿಂದ ದೇಹಾಯಾಸವಾಗಲಿದೆ. ಭೂಮಿ ವಿಚಾರದಲ್ಲಿ ಅನಗತ್ಯ ವಾದ ವಿವಾದಗಳಾಗಬಹುದು.