ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಸಾಂಸಾರಿಕವಾಗಿ ಅನಗತ್ಯವಾಗಿ ಭಿನ್ನಾಭಿಪ್ರಾಯಗಳನ್ನು ಮೈಮೇಲೆಳೆದುಕೊಳ್ಳಬೇಡಿ. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಿರಿ. ಉದ್ಯೋಗ ನಷ್ಟವಾಗುವ ಭೀತಿ ಎದುರಾಗಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ನಿಭಾಯಿಸಿ.ವೃಷಭ: ಕೌಟುಂಬಿಕ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವಾಗ ಅನಿಶ್ಚಿತತೆ ಕಾಡಬಹುದು. ಪ್ರೇಮಿಗಳ ಪಾಲಿಗೆ ಶುಭ ದಿನ. ಸಂಗಾತಿಯ ಮನದಾಸೆ ಪೂರೈಸುವಿರಿ. ವೃತ್ತಿರಂಗದಲ್ಲಿ ಮುನ್ನಡೆ ತೋರಿಬರಲಿದೆ. ಆದರೆ ಹಿತ ಶತ್ರುಗಳ ಬಗ್ಗೆ ಎಚ್ಚರವಹಿಸಿ.ಮಿಥುನ: ಆರೋಗ್ಯ ಸ್ಥಿತಿಯಲ್ಲಿ ಇದುವರೆಗೆ ಎದುರಾಗಿದ್ದ ಸಮಸ್ಯೆಗಳು ನಿವಾರಣೆಯಾಗಲಿದ್ದು,