ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಮನದಾಳದ ದುಃಖಗಳನ್ನು ಆಪ್ತರೊಂದಿಗೆ ಹಂಚಿಕೊಂಡು ಹಗುರವಾಗುವಿರಿ. ದೈಹಿಕ ಆರೋಗ್ಯದಲ್ಲೂ ಏರುಪೇರಾಗಿ ಆತಂಕ ಕಾಡಬಹುದು. ಆದರೆ ಉದ್ಯೋಗ ಕ್ಷೇತ್ರದಲ್ಲಿ ಚುರುಕಾಗಿ ನಿಮ್ಮ ಕೆಲಸಗಳನ್ನು ಪೂರ್ತಿ ಮಾಡುವಿರಿ. ದೇವತಾ ಪ್ರಾರ್ಥನೆ ಮಾಡಿದರೆ ನೆಮ್ಮದಿ.ವೃಷಭ: ಮಾತಿನ ಮೇಲೆ ನಿಗಾ ಇಡಬೇಕಾದ ಅಗತ್ಯವಿದೆ. ದುಡುಕಿ ಮಾತನಾಡಿ ಪ್ರೀತಿ ಪಾತ್ರರ ಮನಸ್ಸಿಗೆ ನೋವುಂಟು ಮಾಡಬೇಡಿ. ಸಾಂಸಾರಿಕವಾಗಿ ದಾಯಾದಿಗಳಿಂದ ಕೆಟ್ಟ ಮಾತು ಕೇಳಿಬಂದೀತು. ವೃತ್ತಿರಂಗದಲ್ಲಿ ಅಭಿವೃದ್ಧಿ ಕಂಡುಬರಲಿದೆ.