ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಆದಾಯದಲ್ಲಿ ವೃದ್ಧಿಯಾಗಲಿದ್ದು, ಆರ್ಥಿಕವಾಗಿ ಚೇತರಿಕೆ ಕಂಡುಬರುವುದು. ಹಾಗಿದ್ದರೂ ಉದ್ಯೋಗ ನಷ್ಟದ ಭೀತಿ, ಸ್ಥಾನ ಪಲ್ಲಟ ಭೀತಿಯಿಂದಾಗಿ ಒಂದು ರೀತಿಯ ಅಸ್ಥಿರತೆ ಕಾಡಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.ವೃಷಭ: ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಅದಕ್ಕೆ ಚಾಡಿ ಹೇಳುವವರು ನಿಮ್ಮ ಸುತ್ತಮುತ್ತಲಿರುತ್ತಾರೆ. ಮಾನಸಿಕವಾಗಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟುಗಳು ದೂರವಾಗಲಿದೆ. ನಿರುದ್ಯೊಗಿಗಳಿಗೆ ತಾತ್ಕಾಲಿಕ