ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ದೂರ ಸಂಚಾರದಿಂದ ಕಾರ್ಯಪ್ರಾಪ್ತಿಯಾಗಲಿದೆ. ಆದರೆ ಮಾನಸಿಕವಾಗಿ ಯಾವುದೇ ಕೆಲಸದಲ್ಲೂ ಸಂತೃಪ್ತಿ ಸಿಗದು. ಹಣಕಾಸಿನ ವ್ಯವಸ್ಥೆಗೆ ಪರದಾಡಬೇಕಾಗುತ್ತದೆ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸುವಿರಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.ವೃಷಭ: ಸಾಂಸಾರಿಕವಾಗಿ ಕಡಿದು ಹೋದ ಸಂಬಂಧಗಳು ಮತ್ತೆ ಬೆಸೆಯಲಿವೆ. ಸಾಂಸಾರಿಕ ಸುಖ ಅನುಭವಿಸುವಿರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ. ವ್ಯಾಪಾರ ವ್ಯವಹಾರದಲ್ಲಿ ಅಡೆತಡೆಗಳು ನಿವಾರಣೆಯಾಗಲಿವೆ. ದೇವತಾ ಪ್ರಾರ್ಥನೆ ಮರೆಯದಿರಿ.ಮಿಥುನ: ವೈವಾಹಿಕ ಜೀವನದ ಸುಖ