ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಕೌಟುಂಬಿಕವಾಗಿ ಇಷ್ಟವಿಲ್ಲದಿದ್ದರೂ ಪ್ರೀತಿ ಪಾತ್ರರಿಗಾಗಿ ಕೆಲವೊಂದು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸುವಿರಿ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಪ್ರಯತ್ನ ಬಲದಿಂದ ಯಶಸ್ಸು ಸಿಗಲಿದೆ. ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ.ವೃಷಭ: ಅನೇಕ ರೀತಿಯ ಖರ್ಚು ವೆಚ್ಚಗಳು ತೋರಿಬರಲಿದ್ದು, ಆರ್ಥಿಕವಾಗಿ ಧನಾದಾಯ ಹೆಚ್ಚಳಕ್ಕೆ ನಾನಾ ಮಾರ್ಗ ಹುಡುಕಿಕೊಳ್ಳಿ. ಗೃಹಕೃತ್ಯಗಳಲ್ಲಿ ಸಂಗಾತಿಯ ಸಹಕಾರ ಸಿಗಲಿದೆ. ಅವಿವಾಹಿತರ ವಿವಾಹ ಪ್ರಯತ್ನಕ್ಕೆ