ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಗೃಹಬಳಕೆ ವಸ್ತುಗಳಿಗಾಗಿ ಧನವ್ಯಯ ಮಾಡಲಿದ್ದೀರಿ. ಸಹೋದರರೊಂದಿಗೆ ಪಾಲು ವ್ಯವಹಾರದಲ್ಲಿ ಭಿನ್ನಾಭಿಪ್ರಾಯವಾಗಬಹುದು. ಹಿರಿಯರ ಮಾತಿಗೆ ಕಿವಿಗೊಡಿ. ರಾಜಕಾರಣಿಗಳಿಗೆ ಮುನ್ನಡೆಯ ಯೋಗವಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.ವೃಷಭ: ಮನೆಗೆ ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದ್ದು, ಸಂಭ್ರಮದ ವಾತಾವರಣವಿರಲಿದೆ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ಹಿರಿಯರಿಂದ ಬಳವಳಿ ಸ್ವೀಕರಿಸುವಿರಿ. ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯ. ದಿನದಂತ್ಯಕ್ಕೆ ಶುಭ ಸುದ್ದಿ.ಮಿಥುನ: ಇಂದು ನಿಮಗೆ ಮಿಶ್ರಫಲವಿದ್ದು,