ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ವ್ಯವಹಾರದಲ್ಲಿ ಅಡೆತಡೆಗಳು ಕಂಡುಬರಲಿವೆ. ಹೆಚ್ಚಿನ ಧನಾರ್ಜನೆಗೆ ನಾನಾ ಮಾರ್ಗಗಳ ಕುರಿತು ಚಿಂತನೆ ನಡೆಸಲಿದ್ದೀರಿ. ಮೇಲಧಿಕಾರಿಗಳೊಂದಿಗೆ ವಿನಾಕಾರಣ ಸಂಘರ್ಷ ಬೇಡ. ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಅಂದುಕೊಂಡ ಕೆಲಸ ಕಾರ್ಯ ನೆರವೇರಿಸಲು ಅಡೆತಡೆಗಳು ತೋರಿಬರಲಿವೆ. ಆತ್ಮವಿಶ್ವಾಸದಿಂದ ಎದುರಿಸಬೇಕಾಗುತ್ತದೆ. ನಿಮ್ಮ ತಾಳ್ಮೆ ಪರೀಕ್ಷಿಸುವ ಪರಿಸ್ಥಿತಿ ಎದುರಾಗಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.ಮಿಥುನ: ವೃತ್ತಿರಂಗದಲ್ಲಿ ಹೊಸ ಎದುರಾಳಿಗಳ ಸೃಷ್ಟಿಯಾಗಲಿದೆ. ಆತ್ಮವಿಶ್ವಾಸದಿಂದ ಎದುರಿಸಬೇಕಾಗುತ್ತದೆ.