ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಮಾನಸಿಕವಾಗಿ ಋಣಾತ್ಮಕ ಚಿಂತನೆಗಳು ತಲೆಯಲ್ಲಿ ಓಡಾಡುತ್ತಿರುತ್ತವೆ. ಕೂತಲ್ಲೇ ಕೂತು ಸೋಮಾರಿಯಾಗಬೇಡಿ. ಹೊಸ ಚಿಂತನೆಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿ. ಅನಗತ್ಯವಾಗಿ ವಾದ ವಿವಾದ ಮೈಮೇಲೆಳೆದುಕೊಳ್ಳಬೇಡಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.ವೃಷಭ: ವೃತ್ತಿರಂಗದಲ್ಲಿ ಅಧಿಕ ಧನಾರ್ಜನೆಗೆ ಕಡೆಗೆ ಗಮನ ಹರಿಯಲಿದೆ. ಹೊಸ ಮಿತ್ರರ ಸಂಪಾದನೆ ಮಾಡಲಿದ್ದೀರಿ. ಕ್ರಿಯಾತ್ಮಕ ಕೆಲಸಗಳಿಂದ ಜನಮನ್ನಣೆ ಸಿಗಲಿದೆ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ದಿನದಂತ್ಯಕ್ಕೆ ಶುಭ