ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ದಿನವೂ ಸಾಯುವವರಿಗೆ ಅಳುವವರು ಯಾರು ಎಂಬ ಸ್ಥಿತಿ ನಿಮ್ಮದಾಗಲಿದೆ. ಅನಗತ್ಯ ಚಿಂತೆಗಳನ್ನು ಮರೆತು ಮುಂದೆ ಹೆಜ್ಜೆ ಹಾಕಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಗೃಹಕೃತ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳೊಂದಿಗೆ ಸಂಘರ್ಷವಾಗದಂತೆ ಎಚ್ಚರಿಕೆ ವಹಿಸಿ. ಹೊಸ ರೀತಿಯ ಪ್ರಯತ್ನಗಳಿಗೆ ಕೈ ಹಾಕಲಿದ್ದೀರಿ. ವ್ಯವಹಾರದಲ್ಲಿ ಹಿತಶತ್ರುಗಳ ಕಾಟವಿರಲಿದೆ. ಧಾರ್ಮಿಕವಾಗಿ ಭಕ್ತಿ ಭಾವ ಮೂಡಲಿದೆ.ಮಿಥುನ: ಸಾಲಗಾರರ ಕಾಟದಿಂದ ಮುಕ್ತಿ