ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಉದ್ಯೋಗ ಕ್ಷೇತ್ರದಲ್ಲಿ ನೀವು ಅಂದುಕೊಂಡ ಕೆಲಸ ಪೂರ್ತಿಗೊಳಿಸಲು ಕೊಂಚ ಶ್ರಮಪಡಬೇಕಾಗಬಹುದು. ಆದರೆ ಅಸಾಧ್ಯವಲ್ಲ. ಸಾಂಸಾರಿಕವಾಗಿ ಆದಷ್ಟು ತಾಳ್ಮೆ ಅಗತ್ಯ. ಗೃಹಕೃತ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ದೇಹಾರೋಗ್ಯದಲ್ಲಿ ಸುಧಾರಣೆಯಾಗಲಿದೆ.ವೃಷಭ: ಕಾರ್ಯರಂಗದಲ್ಲಿ ಮಿತ್ರರು ಕೊಡುವ ಸಮಯೋಚಿತ ಸಲಹೆ ಉಪಯೋಗಕ್ಕೆ ಬರಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳು ಹೆಚ್ಚಾಗಲಿದ್ದು, ಆದಾಯದ ಮಾರ್ಗ ಕುಂಠಿತಗೊಳ್ಳಲಿದೆ. ಮಾನಸಿಕವಾಗಿ ಚಿಂತೆ ಕಾಡಲಿದೆ. ದೇವತಾ ಪ್ರಾರ್ಥನೆ ಮಾಡಿ.ಮಿಥುನ: ಪ್ರೀತಿ ಪಾತ್ರರೊಂದಿಗೆ ಉತ್ತಮ