ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಕಾರ್ಯರಂಗದಲ್ಲಿ ಉತ್ಸಾಹ ಭಂಗವಾಗಲಿದೆ. ಕೆಲವೊಂದು ವಿಚಾರಗಳು ಮನಸ್ಸಿಗೆ ಬೇಸರವುಂಟು ಮಾಡಲಿದೆ. ಆರ್ಥಿಕವಾಗಿ ಸಾಲಗಾರರಿಂದ ಬಾಕಿ ಹಣ ವಸೂಲಾತಿ ಚಿಂತೆ ಕಾಡುವುದು. ಕೌಟುಂಬಿಕವಾಗಿ ಸಮಾಧಾನಕರ ವಾತಾವರಣವಿರಲಿದೆ.ವೃಷಭ: ಕುಟುಂಬದಲ್ಲಿ ಕಷ್ಟ-ಸುಖ ಸಮನಾಗಿರಲಿದ್ದು, ಸಂಗಾತಿಯ ಸಲಹೆಗಳಿಗೆ ಕಿವಿಗೊಡಬೇಕಾಗುತ್ತದೆ. ಉದ್ಯೋಗಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ದೇಹಾರೋಗ್ಯದಲ್ಲಿ ಸುಧಾರಣೆಯಾಗಲಿದೆ.ಮಿಥುನ: ಪ್ರೇಮಿಗಳಿಗೆ ಹಿರಿಯರಿಂದ ವಿರೋಧ ವ್ಯಕ್ತವಾಗಲಿದೆ. ಅಗಲುವಿಕೆಯ ನೋವು ಕಾಡಲಿದೆ. ಸಂತಾನಾಪೇಕ್ಷಿತ