ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಯಾವುದೇ ಕೆಲಸವೇ ಆದರೂ ಆರಂಭದಲ್ಲಿ ಅತಿಯಾದ ಉತ್ಸಾಹದಿಂದ ತೊಡಗಿಸಿಕೊಳ್ಳುವಿರಿ. ಆದರೆ ಸಮಯ ಕಳೆಯದಂತೆ ಉತ್ಸಾಹ ಭಂಗವಾದೀತು. ಆರ್ಥಿಕವಾಗಿ ಗೃಹ ಬಳಕೆ ವಸ್ತುಗಳ ಖರೀದಿಗೆ ಖರ್ಚಾಗಲಿದೆ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.ವೃಷಭ: ವ್ಯವಹಾರದಲ್ಲಿ ಮುನ್ನಡೆಯ ಯೋಗವಿದೆ. ವ್ಯಾಪಾರಿಗಳು ಹೊಸ ದಾರಿಗಳನ್ನು ಕಂಡುಕೊಳ್ಳಲಿದ್ದಾರೆ. ಕೆಳ ಹಂತದ ನೌಕರರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಲಿದೆ. ಹಿರಿಯರಿಗೆ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಬೇಕು. ದೇವತಾ