ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಮೇಲಧಿಕಾರಿಗಳ ಸಲಹೆ ಸೂಚನೆಗಳು ಕಿರಿ ಕಿರಿಯೆನಿಸಬಹುದು. ಕಾರ್ಯಕ್ಷೇತ್ರದಲ್ಲಿ ಅಧಿಕ ಕಾರ್ಯದೊತ್ತಡದಿಂದ ದೇಹಾಯಾಸವಾಗಬಹುದು. ಕೌಟುಂಬಿಕವಾಗಿ ತಾಳ್ಮೆ, ಸಂಯಮದಿಂದಿದ್ದಷ್ಟು ಉತ್ತಮ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.ವೃಷಭ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಸಂಭಾವ್ಯ ಅಪಾಯ ತಪ್ಪಿ ಹೋಗಲಿದೆ. ಅವಿವಾಹಿತರಿಗೆ ವಿವಾಹ ಮಾತುಕತೆಗಳಲ್ಲಿ ಮುನ್ನಡೆ ಸಿಗಲಿದೆ. ನೂತನ ದಂಪತಿಗಳು ಮಧುರ ಕ್ಷಣ ಕಳೆಯಲಿದ್ದಾರೆ. ದೇವತಾ ಪ್ರಾರ್ಥನೆ ಮಾಡಿ.ಮಿಥುನ: ಸಾಂಸಾರಿಕವಾಗಿ ಸಂಗಾತಿಯ ಬಹುದಿನಗಳ ಕನಸು ಈಡೇರಿಕೆಗೆ