ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಉದ್ಯೋಗ ಕ್ಷೇತ್ರದಲ್ಲಿ ಬಿಡುವಿಲ್ಲದ ಕಾರ್ಯದೊತ್ತಡದಿಂದ ದೇಹಾಯಾಸವಾಗಬಹುದು. ಮೇಲಧಿಕಾರಿಗಳ ಸಲಹೆ ಸೂಚನೆ ಪಾಲಿಸಬೇಕಾಗುತ್ತದೆ. ಸಾಂಸಾರಿಕವಾಗಿ ಸಂಗಾತಿಯ ಮನದಾಸೆಗೆ ಬೆಲೆಕೊಡಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ.ವೃಷಭ: ಹೊಸದಾಗಿ ವೃತ್ತಿ ಜೀವನ ಆರಂಭಿಸಿರುವವರಿಗೆ ಭವಿಷ್ಯದ ಚಿಂತೆ ಕಾಡಲಿದೆ. ಆರ್ಥಿಕವಾಗಿ ಸರಿಯಾದ ಯೋಜನೆ ಹಾಕಿಕೊಳ್ಳದಿದ್ದಲ್ಲಿ ತೊಂದರೆಗೆ ಸಿಲುಕಬೇಕಾದೀತು. ಮನೆಯಲ್ಲಿ ನಡೆಯಬೇಕಿದ್ದ ಶುಭ ಮಂಗಲ ಕಾರ್ಯಗಳು ಮುಂದೂಡಿಕೆಯಾಗಲಿವೆ.ಮಿಥುನ: ನೀವೀಗ ಉತ್ತಮ ದಿನಗಳಿಗಾಗಿ ಕಾಯಲೇಬೇಕು. ಕಾರ್ಯರಂಗದಲ್ಲಿ ಪರಿಸ್ಥಿತಿಗಳು ಪ್ರತಿಕೂಲವೆನಿಸಬಹುದು.