ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಬೇಡದ ವಿಚಾರಗಳಿಗೆ ತಲೆಕೆಡಿಸಿಕೊಂಡು ಮಾನಸಿಕ ನೆಮ್ಮದಿ ಹಾಳಾಗಬಹುದು. ತಾಳ್ಮೆ, ಸಂಯಮ ಅಗತ್ಯ. ಹಿರಿಯರೊಂದಿಗೆ ಮಾತನಾಡುವಾಗ ದುಡುಕಿ ಮನಸ್ಸಿಗೆ ನೋವುಂಟು ಮಾಡಬೇಡಿ. ದೇವತಾ ಪ್ರಾರ್ಥನೆಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.ವೃಷಭ: ಕಾರ್ಯರಂಗದಲ್ಲಿ ನಿಮಗೆ ಅನುಕೂಲಕರವಾಗಿ ಎಲ್ಲವೂ ನಡೆಯುತ್ತಿಲ್ಲ ಅನಿಸಿದರೂ ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಕೌಟುಂಬಿಕವಾಗಿ ನೆಮ್ಮದಿ ಸಿಗಲಿದೆ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ.ಮಿಥುನ: ಸಾಂಸಾರಿಕವಾಗಿ ಮಹಿಳೆಯರಿಗೆ ಭಾವುಕ ಸಂದರ್ಭಗಳನ್ನು