ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಮನಸ್ಸಿಗೆ ಆದ ಗಾಯ ಮರೆಯಲು ಕಷ್ಟವಾಗಬಹುದು. ಆದರೆ ಅನಿವಾರ್ಯವಾಗಿ ಹೊಂದಾಣಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಮೇಲಧಿಕಾರಿಗಳ ಕಿರಿ ಕಿರಿಗೆ ತಕ್ಕ ಉತ್ತರ ಕೊಡಲಿದ್ದೀರಿ. ಹಣಕಾಸಿನ ಖರ್ಚು ವೆಚ್ಚದ ಬಗ್ಗೆ ಜಾಗ್ರತೆಯಿರಲಿ.ವೃಷಭ: ಅವಿವಾಹಿತರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ನಿರುದ್ಯೋಗಿಗಳಿಗೆ ಸಾಕಷ್ಟು ಅವಕಾಶಗಳು ಎದುರಾಗಲಿವೆ. ಜಾಣ್ಮೆಯಿಂದ ಬಳಸಿಕೊಳ್ಳಬೇಕು. ಹಳೇ ಮಿತ್ರರ ಭೇಟಿಯಿಂದ ಮನಸ್ಸಿಗೆ ಸಂತಸವಾಗಲಿದೆ. ದೇವತಾ ಪ್ರಾರ್ಥನೆ ಮರೆಯದಿರಿ.ಮಿಥುನ: ವೃತ್ತಿರಂಗದಲ್ಲಿ ಶತ್ರುಕಾಟ ತಪ್ಪಲಿದೆ.