ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ನಿಮ್ಮದೇ ತಪ್ಪಿಗೆ ಅನ್ಯರ ದೂಷಿಸಿ ಪ್ರಯೋಜನವಿಲ್ಲ. ಆರ್ಥಿಕವಾಗಿ ಬಾಕಿ ಹಣ ವಸೂಲಾತಿ ಚಿಂತೆ ಕಾಡಲಿದೆ. ಮನೆಗೆ ಅನಿರೀಕ್ಷಿತ ಅತಿಥಿಗಳ ಆಗಮನವಾಗಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉತ್ಸಾಹ ಕಂಡುಬರಲಿದೆ. ರಾಜಕೀಯದವರಿಗೆ ಮುನ್ನಡೆ.ವೃಷಭ: ಅವಿವಾಹಿತರು ಕಂಕಣ ಬಲ ಕೂಡಿ ಬರಲು ಕುಲದೇವರ ಪ್ರಾರ್ಥನೆ ಮಾಡುವುದು ಉತ್ತಮ. ನಿರುದ್ಯೋಗಿಗಳಿಗೆ ಅಡೆತಡೆಗಳು ಬಂದರೂ ಅಂತಿಮವಾಗಿ ಬಯಸಿದ್ದು ಸಿಗಲಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಚಿಂತೆ