ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ನಿಮ್ಮ ಕ್ರಿಯಾಶೀಲ ಚಿಂತನೆಗಳು ಉದ್ಯೋಗ ಕ್ಷೇತ್ರದಲ್ಲಿ ಸಮಸ್ಯೆಗಳನ್ನು ನಿವಾರಿಸಲು ಸಹಾಯವಾಗಲಿದೆ. ಎಂದೋ ಮಾಡಿದ ಉಪಕಾರ ಇಂದು ಉಪಯೋಗಕ್ಕೆ ಬರಲಿದೆ. ಅವಿವಾಹಿತರು ಶೀಘ್ರ ಕಂಕಣ ಭಾಗ್ಯ ಪಡೆಯಲಿದ್ದಾರೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.ವೃಷಭ: ನೀವು ಹಿಂದೆ ಮಾಡಿದ ತಪ್ಪುಗಳಿಗೆ ಇಂದು ಕೊರಗುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಹೊಸ ಕೆಲಸಗಳಿಗೆ ಕೈ ಹಾಕಲು ಸೂಕ್ತ ದಿನ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಕೆಟ್ಟ ಸ್ನೇಹ