ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ದುಂದು ವೆಚ್ಚಗಳಿಂದ ಮುಂದೆ ತೊಂದರೆ ಅನುಭವಿಸಬೇಕಾದೀತು. ಸರಿಯಾದ ಯೋಜನೆಯೊಂದಿಗೆ ಹೆಜ್ಜೆಯಿಡುವುದು ಮುಖ್ಯ. ವೃತ್ತಿರಂಗದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಮನೆ ಮಾಲಿಕರ ಕಿರಿ ಕಿರಿಯಿಂದ ವಾಸಸ್ಥಳ ಬದಲಾವಣೆಗೆ ಚಿಂತನೆ ಮಾಡಲಿದ್ದೀರಿ.ವೃಷಭ: ಮನೆ, ಕಟ್ಟಡ ನಿರ್ಮಾಣಕ್ಕೆ ಇದು ಸಕಾಲ. ಆರ್ಥಿಕವಾಗಿ ಸಾಲದ ಹಣ ಪಾವತಿಯಾಗಿ ನೆಮ್ಮದಿಯಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ಅವಿವಾಹಿತರ ವಿವಾಹ ಮಾತುಕತೆಗೆ ಅಡ್ಡಿ ಆತಂಕಗಳು