ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಸಮಸ್ಯೆಗಳು ಮೇಲೆ ತೋರಿಬಂದಷ್ಟು ಸುಲಭವೆನಿಸದು. ಕಠಿಣ ಪರಿಶ್ರಮದಿಂದ ಅಂದುಕೊಂಡ ಗುರಿ ಸಾಧನೆ ಮಾಡುವಿರಿ. ಹಳೆಯ ಮಿತ್ರರಿಂದ ಸಹಾಯವಾಗಲಿದೆ. ಸರಕಾರಿ ಲೆಕ್ಕಪತ್ರಗಳ ಬಗ್ಗೆ ಎಚ್ಚರಿಕೆ ಅಗತ್ಯ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.ವೃಷಭ: ಆಸ್ತಿ ಸಂಬಂಧ ವ್ಯವಹಾರಗಳಿಂದ ಲಾಭ ಪಡೆಯಬಹುದು. ಆದರೆ ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ವಾಹನ ಸವಾರರಿಗೆ ಚಾಲೆನಯಲ್ಲಿ ಎಚ್ಚರಿಕೆ ಅಗತ್ಯ. ದಾಂಪತ್ಯದಲ್ಲಿ ಹೊಂದಾಣಿಕೆಯಿಂದ ನಡೆದುಕೊಳ್ಳಿ.ಮಿಥುನ: ಹಣಕಾಸಿನ ಅಡಚಣೆಗಳು ಕಂಡುಬಂದೀತು.