ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ವೃತ್ತಿರಂಗದಲ್ಲಿ ಹೆಚ್ಚಿನ ಹೊಣೆಗಾರಿಕೆ ನಿಮ್ಮ ಮೇಲೆ ಬೀಳಲಿದೆ. ಜಾಣತನದಿಂದ ನಿಭಾಯಿಸಿ. ಕೃಷಿಕರಿಗೆ ವ್ಯವಹಾರದಲ್ಲಿ ಮುನ್ನಡೆ. ಅವಿವಾಹಿತರಿಗೆ ವಿವಾಹ ಮಾತುಕತೆಗಳಲ್ಲಿ ಮುನ್ನಡೆ ಸಿಗಲಿದೆ. ಹೊಸ ಆರೋಗ್ಯ ಸಮಸ್ಯೆಗಳು ತಲೆನೋವು ತರಲಿದೆ.ವೃಷಭ: ರೈತಾಪಿ ವರ್ಗದವರ ಮುಖದಲ್ಲಿ ಸಂತೋಷ ಕಾಣಲಿದೆ. ಆಪ್ತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ದೂರ ಪ್ರಯಾಣ ಮಾಡಬೇಕಾಗಬಹುದು. ಇಷ್ಟ ದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ