ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಮನಸ್ಸಿಗೆ ಹಿತವೆನಿಸುವ ಕೆಲಸ ಮಾಡಲಿದ್ದೀರಿ. ಗೃಹಿಣಿಯರಿಗೆ ಕಾರ್ಯದೊತ್ತಡದಿಂದ ದೇಹಾಯಾಸವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಆರ್ಥಿಕವಾಗಿ ಭವಿಷ್ಯದ ಬಗ್ಗೆ ಯೋಜನೆ ರೂಪಿಸಲಿದ್ದೀರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಬೇಕಾಗುತ್ತದೆ.ವೃಷಭ: ಅನಗತ್ಯ ಮಾತನಾಡಲು ಹೋದರೆ ಮನೆಯಲ್ಲಿ ಕಲಹ ಖಂಡಿತಾ. ತಾಳ್ಮೆ, ಸಂಯಮದಿಂದ ವರ್ತಿಸಿ. ಸಂಗಾತಿಗೆ ಉಡುಗೊರೆ ಕೊಡಲು ಮುಂದಾಗಲಿದ್ದೀರಿ. ಅನಿರೀಕ್ಷಿತವಾಗಿ ಹಳೆಯ ಮಿತ್ರನ ಭೇಟಿಯಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಮುನ್ನಡೆ.ಮಿಥುನ: ದೈವಾನುಗ್ರಹದಿಂದ ನೀವು ಅಂದುಕೊಂಡ