ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ವಿಚಾರವಂತರ ಸಂಗದಿಂದ ಹಲವು ಹೊಸ ಯೋಚನೆಗಳು ಹುಟ್ಟಿಕೊಳ್ಳಲಿದೆ. ನಿಮ್ಮ ವೃತ್ತಿರಂಗದಲ್ಲಿ ಉನ್ನತ ಹಂತಕ್ಕೇರಲು ಹಲವು ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ. ದೇಹಾರೋಗ್ಯದ ಬಗ್ಗೆ ಅನಗತ್ಯ ಚಿಂತೆ ಬೇಡ. ಹಿರಿಯರ ಮಾತಿಗೆ ಕಿವಿಗೊಡಿ.ವೃಷಭ: ಕೆಲಸದಲ್ಲಿರುವ ನಿಮ್ಮ ಶ್ರದ್ಧೆ, ಭಕ್ತಿಗಳೇ ನಿಮ್ಮನ್ನು ಕಾಪಾಡಲಿದೆ. ಮಹಿಳೆಯರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ, ಅಪವಾದದ ಭೀತಿಯಿದೆ. ಕಾರ್ಮಿಕ ವರ್ಗದವರಿಗೆ ಉನ್ನತ ಸ್ಥಾನಕ್ಕೇರುವ ಅವಕಾಶಗಳು ಸಿಗಲಿವೆ. ವಿದ್ಯಾರ್ಥಿಗಳಿಗೆ ಕಠಿಣ