ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಮೇಲಧಿಕಾರಿಗಳ ಕಿರಿ ಕಿರಿಯಿಂದ ಮನಸ್ಸಿಗೆ ಬೇಸರವಾಗಲಿದೆ. ಉದ್ಯೋಗ ಬದಲಾವಣೆಗೆ ಮನಸ್ಸು ಬಯಸುವುದು. ಕ್ರಿಯಾತ್ಮಕ ಕೆಲಸಗಳಿಗೆ ಚಾಲನೆ ನೀಡಿ. ಮಹಿಳೆಯರಿಗೆ ಅಪವಾದದ ಭೀತಿಯಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ.ವೃಷಭ: ಹಿರಿಯರಿಗೆ ದೇವಾಲಯ ಸಂದರ್ಶನ ಯೋಗವಿದೆ. ಸರಕಾರಿ ಲೆಕ್ಕಪತ್ರಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ನಿಮ್ಮ ಮೇಲಿರಲಿದೆ. ಅನಿರೀಕ್ಷಿತವಾಗಿ ಧನಲಾಭವಾಗಲಿದೆ. ದೇವತಾ ಕಾರ್ಯಗಳಿಗೆ ಚಾಲನೆ ನೀಡಲಿದ್ದೀರಿ. ವಿನಾಕಾರಣ ಖರ್ಚು ವೆಚ್ಚ ಮಾಡಬೇಡಿ.ಮಿಥುನ: ದಾಯಾದಿಗಳೊಂದಿಗೆ ನಿಮ್ಮ