ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಅಂದುಕೊಂಡಿದ್ದ ಕೆಲಸಗಳು ಸರಿಯಾದ ಸಮಯದಲ್ಲಿ ನಡೆಯದೇ ಮನಸ್ಸಿಗೆ ಕಸಿವಿಸಿಯಾಗಲಿದೆ. ಆರ್ಥಿಕವಾಗಿ ಹಣಕಾಸಿನ ಬಗ್ಗೆ ಲೆಕ್ಕಾಚಾರದ ಹೆಜ್ಜೆಯಿಡಬೇಕಾಗುತ್ತದೆ. ಗೃಹಿಣಿಯರಿಗೆ ಗೃಹಕೃತ್ಯಗಳಿಂದ ದೇಹ ಹೈರಾಣಾಗಲಿದೆ.ವೃಷಭ: ದೇಹಾರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ನಿಧಾನವಾಗಿ ಚೇತರಿಸಿಕೊಳ್ಳಲಿವೆ. ಸಾಂಸಾರಿಕವಾಗಿ ಹೊಸ ಅತಿಥಿಗಳ ಆಗಮನವಾಗಲಿದೆ. ಸಂಗಾತಿಯ ಮಾತಿಗೆ ಬೆಲೆಕೊಡಬೇಕಾಗುತ್ತದೆ. ಪ್ರೀತಿ ಪಾತ್ರರೊಂದಿಗೆ ಸುಂದರ ಕ್ಷಣ ಕಳೆಯಲಿದ್ದೀರಿ.ಮಿಥುನ: ವೃತ್ತಿರಂಗದಲ್ಲಿ ಹೆಚ್ಚಿನ ಅವಕಾಶ ಎದುರಾಗಲಿದ್ದು, ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು.