ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚು ವೆಚ್ಚಗಳೂ ಕಂಡುಬರಲಿದೆ. ಸಂಗಾತಿಯ ಕಿರಿ ಕಿರಿ ಇದ್ದೇ ಇರುತ್ತದೆ. ಎಲ್ಲವನ್ನೂ ತಾಳ್ಮೆಯಿಂದ ನಿಭಾಯಿಸಿಕೊಂಡು ಹೋಗುವುದನ್ನು ಕಲಿಯಬೇಕು. ಆರೋಗ್ಯದ ಬಗ್ಗೆ ಉಪೇಕ್ಷೆ ಬೇಡ.ವೃಷಭ: ನಿಶ್ಚಿತ ಕಾರ್ಯಗಳನ್ನು ಪೂರ್ತಿ ಮಾಡುವಿರಿ. ಆಕಸ್ಮಿಕವಾಗಿ ಭೇಟಿಯಾಗುವ ವ್ಯಕ್ತಿಯಿಂದ ನಿಮಗೆ ಒಳ್ಳೆಯದಾಗಲಿದೆ. ಸಂಗಾತಿಯ ಮನೋಭಿಲಾಷೆಗಳನ್ನು ಪೂರ್ತಿ ಮಾಡಲಿದ್ದೀರಿ. ದೇವತಾ ಪ್ರಾರ್ಥನೆ ಮಾಡುವಿರಿ.ಮಿಥುನ: ಎಷ್ಟೇ ಅಡೆತಡೆಗಳು ಬಂದರೂ ಕೈ ಹಿಡಿದ ಕೆಲಸಗಳಿಂದ ಹಿಂದೆ