ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಅನಿರೀಕ್ಷಿತವಾಗಿ ದೇಹಾರೋಗ್ಯದಲ್ಲಿ ಏರುಪೇರಾಗಲಿದ್ದು, ಚಿಂತೆಗೆ ಕಾರಣವಾಗಲಿದೆ. ಅಧಿಕ ಖರ್ಚು ವೆಚ್ಚಗಳಗಾಗಲಿವೆ. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡವಿರಲಿದೆ. ಮನಸ್ಸಿನ ನೆಮ್ಮದಿಗಾಗಿ ದೇವತಾ ಪ್ರಾರ್ಥನೆ ಮಾಡಿ.ವೃಷಭ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಕಿರುಕುಳ ಕಂಡುಬರುವುದು. ನಿಮ್ಮ ದುಃಖ ದುಮ್ಮಾನಗಳನ್ನು ಸಂಗಾತಿಯ ಜತೆ ಹಂಚಿಕೊಳ್ಳಲಿದ್ದೀರಿ. ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ನೆರವೇರಿಸಲು ಅಡೆತಡೆಗಳು ತೋರಿಬಂದೀತು. ತಾಳ್ಮೆ ಅಗತ್ಯ.ಮಿಥುನ: ಇಂದು ನಿಮ್ಮ ಮಾತಿನಿಂದಲೇ ಮನಸ್ತಾಪವಾಗುವ ಸಾಧ್ಯತೆಯಿದೆ. ಹೀಗಾಗಿ ತಾಳ್ಮೆ, ಸಂಯಮ