ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ. ಮಹಿಳೆಯರು ಅಲಂಕಾರಿಕ ವಸ್ತುಗಳಿಗಾಗಿ ಖರ್ಚು ವೆಚ್ಚ ಮಾಡುವರು. ಮನಸ್ಸಿನ ಇಚ್ಛೆ ಪೂರೈಸಲು ಮುಂದಾಗುವಿರಿ. ಆದರೆ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.ವೃಷಭ: ಕುಟುಂಬ ಸದಸ್ಯರೊಡನೆ ನಿಮ್ಮ ಬಾಂಧವ್ಯ ಗಟ್ಟಿಯಾಗಲಿದೆ. ಮಡದಿ ಮಕ್ಕಳೊಂದಿಗೆ ಸಂತೋಷದ ಕ್ಷಣ ಕಳೆಯಲಿದ್ದೀರಿ. ಬಾಕಿ ಕೆಲಸಗಳನ್ನು ಪೂರ್ತಿ ಮಾಡಲು ಮುಂದಾಗಲಿದ್ದೀರಿ. ನಿರುದ್ಯೋಗಿಗಳು ಸ್ವಯಂ ಉದ್ಯೋಗದ ಬಗ್ಗೆ ಯೋಚನೆ ಮಾಡಲಿದ್ದೀರಿ.ಮಿಥುನ: ಕೆಲಸ