ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ನಿಮ್ಮ ಒಳ್ಳೆಯ ವಿಚಾರಗಳಿಗೆ ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ಆದರೆ ಒಳ್ಳೆಯತನ ದುರುಪಯೋಗಪಡಿಸಿಕೊಳ್ಳುವವರ ಬಗ್ಗೆ ಎಚ್ಚರಿಕೆಯಿರಲಿ. ದೇಹಾರೋಗ್ಯದಲ್ಲಿ ಏರುಪೇರಾಗಬಹುದು. ಎಚ್ಚರಿಕೆಯಿಂದಿರಿ.ವೃಷಭ: ಮಾನಸಿಕವಾಗಿ ಪ್ರಯಾಸಕರವೆನಿಸುವ ಕೆಲಸಗಳನ್ನು ಅನಿವಾರ್ಯವಾಗಿ ಮಾಡಬೇಕಾಗುತ್ತದೆ. ನಿಮ್ಮ ಸಂಗಾತಿಯ ಬೆಂಬಲ ನಿಮಗೆ ಸಿಗುವುದು. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು.ಮಿಥುನ: ಇಷ್ಟಪಟ್ಟಿದ್ದನ್ನು ಪಡೆಯಬೇಕಾದರೆ ಕಷ್ಟಪಡಲೇಬೇಕಾಗುತ್ತದೆ. ಧನಾದಾಯ ಉತ್ತಮವಾಗಿರಲಿದೆ. ವ್ಯವಹಾರದಲ್ಲಿ ಮುನ್ನಡೆ ಕಂಡುಬರುವುದು. ಯೋಗ್ಯ ವಯಸ್ಕರಿಗೆ ಸೂಕ್ತ