ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಕಾರ್ಯದೊತ್ತಡ ಅಧಿಕವಾಗಲಿದ್ದು, ನಿಮ್ಮ ಕೋಪ ತಾಪಗಳೂ ಹೆಚ್ಚಾಗಲಿವೆ! ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳೊಂದಿಗೆ ಹೊಮದಾನಿಕೆ ನಡೆಸಬೇಕಾಗುತ್ತದೆ. ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಿ.ವೃಷಭ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಮಾತು ಕೇಳುವವರಿಲ್ಲದೇ ಅಸಹನೆಯಾದೀತು. ತಾಳ್ಮೆ, ಸಂಯಮ ಅಗತ್ಯ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಲಿದ್ದೀರಿ.ಮಿಥುನ: ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡುವುದರಿಂದ ಎಲ್ಲವೂ ನೀವಂದುಕೊಂಡಂತೇ ನಡೆಯಲಿದೆ. ವ್ಯಾವಹಾರಿಕವಾಗಿ ಲಾಭದಾಯಕ ದಿನಗಳು.