ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಸವಾಲುಗಳನ್ನು ಹೊಸ ರೀತಿಯಲ್ಲಿ ಎದುರಿಸಲು ಸಜ್ಜಾಗಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾತ್ಮಕತೆಯಿಂದ ಎಲ್ಲರ ಮನಗೆಲ್ಲಲಿದ್ದೀರಿ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಚಿಂತೆ ಬೇಡ.ವೃಷಭ: ಇನ್ನೊಬ್ಬರನ್ನು ಮೆಚ್ಚಿಸಲು ನಿಮ್ಮತನವನ್ನು ಮರೆಯಬೇಕಿಲ್ಲ. ಮನಸ್ಸಿಗೆ ಹಿಡಿಸಿದ ಕೆಲಸ ಮಾಡಲಿದ್ದೀರಿ. ಸರಕಾರಿ ನೌಕರರಿಗೆ ಉದ್ಯೋಗದಲ್ಲಿ ಮುನ್ನಡೆಯ ಯೋಗವಿದೆ. ಅತಿಯಾದ ವಿಶ್ವಾಸವೂ ವಂಚನೆಗೆ ಕಾರಣವಾದೀತು, ಎಚ್ಚರ.ಮಿಥುನ: ಬಹುದಿನಗಳಿಂದ ಕುಟುಂಬ ಸದಸ್ಯರು ಮಾಡುತ್ತಿದ್ದ ಬೇಡಿಕೆ ಪೂರ್ತಿ ಮಾಡಲಿದ್ದೀರಿ.