ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಮನಸ್ಸಿನಲ್ಲಿ ಕೊರೆಯುತ್ತಿರುವ ಕೆಲವೊಂದು ವಿಚಾರಗಳು ನಿಮ್ಮ ಆತಂಕ ಹೆಚ್ಚಿಸಲಿವೆ. ಸಂಗಾತಿಯ ಅಸಮಾಧಾನಕ್ಕೆ ಗುರಿಯಾಗಲಿದ್ದೀರಿ. ಆರ್ಥಿಕವಾಗಿ ಅಧಿಕ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.ವೃಷಭ: ಅಪರಿಚಿತರೊಡನೆ ಅನಗತ್ಯ ಸ್ನೇಹ ಮಾಡಿಕೊಳ್ಳಲು ಹೋಗದಿರುವುದೇ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಸ್ಥಾನ ಮಾನಗಳನ್ನು ಯಾರೂ ಕಸಿದುಕೊಳ್ಳಲು ಆಗದು. ವಿದ್ಯಾರ್ಥಿಗಳಿಗೆ ಮುನ್ನಡೆಗೆ ಅವಕಾಶ ತೋರಿಬರಲಿದೆ.ಮಿಥುನ: ನಿಮ್ಮ ಇಚ್ಛೆಗೆ ಅನುಸಾರವಾಗಿ ಎಲ್ಲಾ ಕೆಲಸಗಳು ನಡೆಯಬೇಕೆಂದು ಬಯಸುವುದು ತಪ್ಪಾಗುತ್ತದೆ.