ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ವೈಚಾರಿಕವಾಗಿ ಭಿನ್ನತೆಯಿದ್ದರೂ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಏಳಿಗೆಗೆ ಪೂರಕವಾದ ಬೆಳವಣಿಗೆಗಳು ನಡೆಯಲಿವೆ. ಆರ್ಥಿಕವಾಗಿ ಹಣಕಾಸಿಗೆ ತೊಂದರೆಯಿರದು.ವೃಷಭ: ಇಷ್ಟ ದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡುವುದರಿಂದ ಉದ್ಯೋಗ ಸಂಬಂಧೀ ಅಡೆತಡೆಗಳು ನಿವಾರಣೆಯಾಗಲಿವೆ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆಬರುವುದು. ತಾಳ್ಮೆಯಿರಲಿ.ಮಿಥುನ: ನಿಮ್ಮ ಏಳಿಗೆಗೆ ಅಡ್ಡಿ ಉಂಟುಮಾಡುವವರನ್ನು ಎದುರಿಸಲು ಕಲಿಯಬೇಕು. ಸರಕಾರಿ ಕೆಲಸದಲ್ಲಿರುವವರಿಗೆ ಕಾರ್ಯದೊತ್ತಡವಿದ್ದೀತು. ಮಹಿಳೆಯರಿಗೆ ಮುಖ್ಯವಾಗಿ ತಾಳ್ಮೆ ಅಗತ್ಯ.