ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ವೃತ್ತಿರಂಗದಲ್ಲಿ ಹಿತಶತ್ರುಗಳ ಕೈವಾಡದಿಂದ ಸಿಗಬೇಕಾದ ಸ್ಥಾನ ತಪ್ಪಿ ಹೋದೀತು. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಆದರೆ ದುಂದು ವೆಚ್ಚ ಬೇಡ. ಮಕ್ಕಳ ಶಿಕ್ಷಣದಲ್ಲಿ ಉನ್ನತ ಸಾಧನೆಯಿಂದ ಸಂತೋಷ ಸಿಗಲಿದೆ.ವೃಷಭ: ಸಾಂಸಾರಿಕವಾಗಿ ಜಂಜಾಟಗಳಿಂದ ಕೂಡಿದ ದಿನವಾಗಲಿದೆ. ನಿಮ್ಮ ಕೆಲವೊಂದು ನಿರ್ಧಾರಗಳು ಸಂಗಾತಿಯ ಅಸಮಾಧಾನಕ್ಕೆ ಕಾರಣವಾದೀತು. ಆದಾಯ ಗಳಿಕೆಯಲ್ಲಿ ವೃದ್ಧಿಯಾದರೂ, ಖರ್ಚೂ ಅಷ್ಟೇ ಹೆಚ್ಚಾಗಲಿದೆ.ಮಿಥುನ: ನೂತನ ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು