ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಕಾರ್ಯಕ್ಷೇತ್ರದಲ್ಲಿ ಹಲವು ಅಡೆತಡೆಗಳು ಬಂದರೂ ಅಂತಿಮವಾಗಿ ಕಾರ್ಯಸಾಧನೆಯಾಗಲಿದೆ. ಆರ್ಥಿಕವಾಗಿ ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾದೀತು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶದ ನಿರೀಕ್ಷೆ.ವೃಷಭ: ವ್ಯಾವಹಾರಿಕವಾಗಿ ಚೇತರಿಕೆಯ ವಾತಾವರಣವಿರಲಿದ್ದು, ಹೊಸ ಉತ್ಸಾಹ ಮೂಡಲಿದೆ. ಸಂಗಾತಿಯ ಕೆಲವೊಂದು ಸಲಹೆಗಳು ಉಪಯುಕ್ತವೆನಿಸಲಿದೆ. ಬೇಡವೆಂದು ಉಪೇಕ್ಷಿಸಿದ್ದ ವಸ್ತುಗಳು ಉಪಯೋಗಕ್ಕೆ ಬರಲಿವೆ.ಮಿಥುನ: ನೂತನ ಬಾಂಧವ್ಯದಿಂದ ನಿಮ್ಮಲ್ಲಿ ಹೊಸ ಉತ್ಸಾಹದ ಜೊತೆಗೆ ಹೊಸ ಯೋಜನೆಗಳನ್ನು ದಾರಿಗೆ ತರಲು ಸಹಕಾರಿಯಾಗುವುದು.