ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಉತ್ತಮ ಅವಕಾಶಕ್ಕಾಗಿ ಕಾಯಲೇಬೇಕಾದ ಪರಿಸ್ಥಿತಿ ನಿಮ್ಮದು. ತಾಳ್ಮೆ ಪರೀಕ್ಷೆ ನಡೆದೀತು. ನ್ಯಾಯಾಲಯದ ಪ್ರಕ್ರಿಯೆಗಳು ವಿಳಂಬಗತಿಯಲ್ಲಿ ಸಾಗಲಿವೆ. ಕೆಳ ಹಂತದ ನೌಕರರಿಗೆ ಉದ್ಯೋಗ ನಷ್ಟದ ಭೀತಿ ಎದುರಾದೀತು.ವೃಷಭ: ವೃತ್ತಿರಂಗದಲ್ಲಿ ನಿಮಗಿದ್ದ ಕಂಟಕಗಳು ನಿವಾರಣೆಯಾಗಿ ನಿಮ್ಮ ಹಾದಿ ಸುಗಮವಾಗಲಿದೆ. ಕ್ರಿಯಾತ್ಮಕ ಕೆಲಸಗಳಿಂದ ಎಲ್ಲರ ಗಮನ ಸೆಳೆಯಲಿದ್ದೀರಿ. ಕೃಷಿಕರಿಗೆ ಲಾಭವೂ ಇಲ್ಲದ ನಷ್ಟವೂ ಇಲ್ಲದ ಸಮಸ್ಥಿತಿ.ಮಿಥುನ: ಸರಕಾರಿ ಕೆಲಸಗಳು ಸುಗಮವಾಗಿ ನೆರವೇರಲಿವೆ.